ಎಸ್ಸೆಸ್ಸೆಫ್ ನಿಂದ ರಮಝಾನ್ ದಅವಾ ದಾಇಗಳಿಗೆ ಬೀಳ್ಕೊಡುಗೆ

ಮಂಗಳೂರು, ಎ.1: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ಪ್ರತೀ ವರ್ಷದಂತೆ ಉತ್ತರ ಕರ್ನಾಟಕಕ್ಕೆ ರಮಝಾನ್ ದಅವಾಗೆ ತೆರಳುವ ದಾಇಗಳಿಗೆ ಬೀಳ್ಕೊಡುಗೆ ಸಮಾರಂಭ ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಹಾಫಿಳ್ ಸುಫ್ಯಾನ್ ಸಖಾಫಿ ಅಧ್ಯಕ್ಷತೆಯಲ್ಲಿ ಪಡೀಲ್ ಜುಮಾ ಮಸೀದಿಯಲ್ಲಿ ನಡೆಯಿತು.
ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್ ಮರಿಕ್ಕಳ ಕಾರ್ಯಕ್ರಮ ಉದ್ಘಾಟಿಸಿದರು.
ಪಡೀಲ್ ಜುಮಾ ಮಸೀದಿಯ ಅಧ್ಯಕ್ಷ ಹಮೀದ್ ಹಾಜಿ, ಎಸ್.ವೈ.ಎಸ್. ಮಂಗಳೂರು ನಾಯಕರಾದ ರಶೀದ್ ಹಾಜಿ ಪಾಂಡೇಶ್ವರ, ಇಸ್ಹಾಕ್ ತಂಙಳ್, ಜಬ್ಬಾರ್ ಕಣ್ಣೂರ್, ರಾಜ್ಯ ಕಾರ್ಯದರ್ಶಿಗಳಾದ ಸಫ್ವಾನ್ ಚಿಕ್ಕಮಗಳೂರು, ಹಕೀಂ ಬೆಂಗಳೂರು, ನವಾಝ್ ಭಟ್ಕಳ್, ರಾಜ್ಯ ದಅವಾ ಕನ್ವೀನರ್ ಸೈಯದ್ ಖುಬೈಬ್ ತಂಙಳ್, ದ.ಕ. ವೆಸ್ಟ್ ಜಿಲ್ಲಾಧ್ಯಕ್ಷ ನವಾಝ್ ಸಖಾಫಿ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಅಲ್ತಾಫ್ ಶಾಂತಿಬಾಗ್ ಉಪಸ್ಥಿತರಿದ್ದು, ಶುಭ ಹಾರೈಸಿದರು.
ಪಡೀಲ್ ಜುಮಾ ಮಸೀದಿಯ ಖತೀಬ್ ಅಹ್ಸನಿ ಉಸ್ತಾದ್ ದುಆಗೈದರು. ರಾಜ್ಯ ದಅವಾ ಕಾರ್ಯದರ್ಶಿ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಸ್ವಾಗತಿಸಿದರು. ರಾಜ್ಯ ಯು.ಡಿ. ಕಾರ್ಯದರ್ಶಿ ರವೂಫ್ ಖಾನ್ ಕುಂದಾಪುರ ವಂದಿಸಿದರು.