ಸುಳ್ಯದ ಕೆ.ವಿ.ಜಿ. ಡೆಂಟಲ್ ಕಾಲೇಜಿಗೆ 1 ಚಿನ್ನದ ಪದಕ, 51 ರ‍್ಯಾಂಕ್ ಗಳು
ಸುಳ್ಯ : ಪ್ರತಿಷ್ಠಿತ ರಾಜೀವ್ ಗಾಂದಿ ಆರೋಗ್ಯ ವಿಶ್ವವಿದ್ಯಾನಿಲಯ ನಡೆಸಿದ ದಂತ ವ್ಯೆದ್ಯಕೀಯ (ಬಿ.ಡಿ.ಯಸ್) ಹಾಗೂ ಸ್ನಾತಕೋತ್ತರ ವಿಭಾಗ (ಎಂ.ಡಿ.ಎಸ್) ಪರೀಕ್ಷೆಗಳಲ್ಲಿ ಸುಳ್ಯದ ಕೆ.ವಿ.ಜಿ. ಡೆಂಟಲ್ ಕಾಲೇಜಿನ ಓರ್ವ ವಿದ್ಯಾರ್ಥಿನಿಗೆ ವಿಶ್ವವಿದ್ಯಾನಿಲಯದ ಚಿನ್ನದ ಪದಕ, ದಂತ ವ್ಯೆದ್ಯಕೀಯ ಸ್ನಾತಕೋತ್ತರ ವಿಭಾಗದಲ್ಲಿ 9 ರ‍್ಯಾಂಕ್ ಗಳನ್ನು, ದಂತ ವ್ಯೆದ್ಯಕೀಯ ಪದವಿ ವಿಭಾಗದಲ್ಲಿ 41 ರ‍್ಯಾಂಕ್ ಗಳನ್ನು ಹಾಗೂ ಡೆಂಟಲ್ ಹೈಜಿನ್ ಡಿಪ್ಲೋಮ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಸೇರಿದಂತೆ ಒಟ್ಟು 51 ರ‍್ಯಾಂಕ್ ಗಳನ್ನು ಪಡೆದಿದ್ದಾರೆ.
ಪೆರಿಯೋಡಾಂಟಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ.ಯಂ.ಯಂ. ದಯಾಕರ್ ಅವರ ಮಾರ್ಗದರ್ಶನದಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಚಾಂದಿನಿ ರಫಿ ಪ್ರಥಮ ರ‍್ಯಾಂಕ್ ಪಡೆದು ರಾಜೀವ್ ಗಾಂಧಿ ವಿ.ವಿ.ಯ ಚಿನ್ನದ ಪದಕಕ್ಕೆ ಅರ್ಹರಾಗಿರುತ್ತಾರೆ. ಡಾ. ನಿತ್ಯಭಾಗ್ಯಲಕ್ಷ್ಮಿ 8ನೇ ರ್ಯಾಂಕ್ ಪಡೆದಿದ್ದಾರೆ.
ಕನ್ಸರ್‍ವೇಟಿವ್ ಡೆಂಟಿಸ್ಟ್ರಿ ವಿಭಾಗದ ಮುಖ್ಯಸ್ಥರಾದ ಡಾ.ಕೃಷ್ಣ ಪ್ರಸಾದ್ ಎಲ್. ಅವರ ಮಾರ್ಗದರ್ಶನದಲ್ಲಿ ಸ್ನಾತಕೋತ್ತರ ವಿಭಾಗದಲ್ಲಿಡಾ. ಹಿತೈಶ್ ವಿದ್ಯಾಧರ್ ಹಾಗೂ ಡಾ. ಲಕ್ಷ್ಮಿ ಪಾಂಡೆ 9ನೇ ರ್ಯಾಂಕ್, ಡಾ. ಮಹಮ್ಮದ್ ಸಫೀರ್ 10ನೇ ರ್ಯಾಂಕ್ ಪಡೆದಿದ್ದಾರೆ.
ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ ವಿಭಾಗದ ಮುಖ್ಯಸ್ಥರಾದ ಡಾ.ನುಸ್ರತ್ ಫರೀದ್ ಅವರ ಮಾರ್ಗದರ್ಶನದಲ್ಲಿ ವಿಭಾಗದಲ್ಲಿ ಡಾ.ಆಸ್ಮಿನ್ ಪಿ.ಕೆ.2ನೇ ರ್ಯಾಂಕ್ ಹಾಗೂ ಡಾ. ಭರತ್ ಶೇಖರ್ 10ನೇ ರ್ಯಾಂಕ್ ಪಡೆದಿದ್ದಾರೆ.
ಓರಲ್ ಸರ್ಜರಿ ವಿಭಾಗದ ಮುಖ್ಯಸ್ಥರಾದ ಡಾ.ಪ್ರಸನ್ನಕುಮಾರ್ ಡಿ ಅವರ ಮಾರ್ಗದರ್ಶನದಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಸ್ನೇಹ ಕುಲಕರ್ಣಿ 7ನೇ ರ್ಯಾಂಕ್ ಪಡೆದಿದ್ದಾರೆ.
ಆರ್ಥೋಡಾಂಟಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಶರತ್ ಕುಮಾರ್ ಶೆಟ್ಟಿಅವರ ಮಾರ್ಗದರ್ಶನದಲ್ಲಿ ಸ್ನಾತಕೋತ್ತರ ಪಿ.ಜಿ. ಡಿಪ್ಲೋಮ ವಿಭಾಗದಲ್ಲಿ ಮೋನಿಕಾ ವಿ.ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ದಂತ ವೈದ್ಯಕೀಯ ಪದವಿ ವಿಭಾಗದಲ್ಲಿ ಪ್ರಥಮ ಬಿ.ಡಿ.ಯಸ್.ನಲ್ಲಿಡಾ. ಸೃಜನ 2ನೇ ರ್ಯಾಂಕ್ ಹಾಗೂ ಬಿ.ಡಿ.ಯಸ್. ವಿಭಾಗದಲ್ಲಿ 10ನೇ ರ್ಯಾಂಕ್ ಪಡೆದಿದ್ದಾರೆ. ಅಲ್ಲದೆ ಜನರಲ್ ಆನಾಟಮಿ ವಿಷಯದಲ್ಲಿ ಡಾ.ಸೃಜನಿ ಪಿ. 4 ನೇ ರ್ಯಾಂಕ್, ಡಾ.ಆಯಿಷತ್ ಅಫೀಯ, ಡಾ. ಸೃಜನ ಹಾಗೂ ಡಾ. ಸುಚೇತ 6ನೇ ರ್ಯಾಂಕ್, ಡಾ. ಸ್ವಾತಿ ಕೃಷ್ಣ 6ನೇ ರ್ಯಾಂಕ್, ಫಿಸಿಯೋಲಾಜಿ ಮತ್ತು ಬಯೋಕೆಮಿಸ್ಟ್ರಿ ವಿಷಯದಲ್ಲಿ ಡಾ. ಸೃಜನ 2ನೇ ರ್ಯಾಂಕ್, ಡಾ.ವೈಭವಿ ಭಟ್ 2ನೇ ರ್ಯಾಂಕ್ ಪಡೆದಿದ್ದಾರೆ.
ಡೆಂಟಲ್ ಆನಾಟಮಿ ವಿಷಯದಲ್ಲಿ ಡಾ.ರಾಗಶ್ರೀ 2ನೇ ರ್ಯಾಂಕ್, ಡಾ. ಸೃಜನ 6ನೇ ರ್ಯಾಂಕ್, ಡಾ. ಕೀರ್ತನಾ 7ನೇ ರ್ಯಾಂಕ್, ಡಾ.ಅಂಜು ಪಾರ್ವತಿ ನಾಯರ್ 8ನೇ ರ್ಯಾಂಕ್, ಡಾ.ಡೋನಾ ಜಾನ್ಸನ್ ಹಾಗೂ ಡಾ. ರಿಧಿಯಸ್. ಕುಮಾರ್ 9ನೇ ರ್ಯಾಂಕ್, ಜನರಲ್ ಪೆಥಾಲಾಜಿ ಮತ್ತು ಮೈಕ್ರೋ ಬಯೋಲಾಜಿ ವಿಷಯದಲ್ಲಿ ಡಾ. ರಿಧಿಯಸ್. ಕುಮಾರ್ 4ನೇ ರ್ಯಾಂಕ್, ಡಾ. ವೈಭವಿ ಭಟ್ 9ನೇ ರ‍್ಯಾಂಕ್, ಡೆಂಟಲ್ ಮೆಟೀರಿಯಲ್ಸ್ ವಿಷಯದಲ್ಲಿ ಡಾ.ಡೋನಾ ಜಾನ್ಸನ್ 6ನೇ ರ್ಯಾಂಕ್, ಪ್ರಿಕ್ಲೀನಿಕಲ್ ಕನ್ಸರ್‍ವೇಟಿವ್ ಡೆಂಟಿಸ್ಟ್ರಿನಲ್ಲಿ ಡಾ. ಸೃಜನ 3ನೇ ರ್ಯಾಂಕ್, ಡಾ. ಅಂಜು ಪಾರ್ವತಿ ನಾಯರ್ 5ನೇ ರ್ಯಾಂಕ್, ಡಾ.ಸೃಜನಿ ಪಿ.6ನೇ ರ್ಯಾಂಕ್, ಡಾ.ಡೋನಾ ಜಾನ್ಸನ್ 7ನೇ ರ್ಯಾಂಕ್, ಡಾ. ರಿಫಾನಾ 8ನೇ ರ್ಯಾಂಕ್, ಡಾ. ಪ್ರತ್ಯೂಷ, ಡಾ.ರಿಧಿಯಸ್. ಕುಮಾರ್ ಹಾಗೂ ಡಾ. ವೈಭವಿ ಭಟ್ 9ನೇ ರ್ಯಾಂಕ್, ಡಾ.ಏಂಜಲ್ ಸುಸಾನ್ ಥಾಮಸ್, ಡಾ.ಗೌರಿ ಪೈ, ಡಾ.ಚೆಲ್ಸಕುರಿಯನ್, ಡಾ.ಶೃದ್ಧಾಯಸ್. ನಂಬಿಯರ್ 10ನೇ ರ್ಯಾಂಕ್, ಪ್ರಿಕ್ಲೀನಿಕಲ್ ಪ್ರೋಸ್ತೋಡಾಂಟಿಕ್ಸ್ ನಲ್ಲಿ ಡಾ.ಏಂಜಲ್ ಸುಸಾನ್‍ಥಾಮಸ್ 5ನೇ ರ್ಯಾಂಕ್, ಡಾ. ಪ್ರತ್ಯೂಷ 6ನೇ ರ್ಯಾಂಕ್, ಡಾ. ಅಂಜು ಪಾರ್ವತಿ ನಾಯರ್ 8ನೇ ರ್ಯಾಂಕ್, ಡಾ.ಸೃಜನಿ ಪಿ. ಹಾಗೂ ಡಾ. ಶೃದ್ಧಾಯಸ್. ನಂಬಿಯಾರ್ 10ನೇ ರ್ಯಾಂಕ್, ಪೆರಿಯೊಡೋಂಟಿಕ್ಸ್‍ನಲ್ಲಿ ಡಾ. ಸೃಜನ 7ನೇ ರ್ಯಾಂಕ್, ಓರಲ್ ಸರ್ಜರಿಯಲ್ಲಿಡಾ. ಶೃದ್ಧಾಯಸ್. ನಂಬಿಯಾರ್ 4ನೇ ರ್ಯಾಂಕ್, ಡಾ.ರಿಧಿಯಸ್. ಕುಮಾರ್ 5ನೇ ರ್ಯಾಂಕ್, ಡಾ. ಪ್ರಿಯಾಂಕ 6ನೇ ರ್ಯಾಂಕ್, ಡಾ.ಸಿದ್ರಾ ರಿಯಾಝ್ 7ನೇ ರ್ಯಾಂಕ್, ಡಾ. ಸೃಜನ 9ನೇ ರ್ಯಾಂಕ್ ಪಡೆದಿದ್ದಾರೆ.
ಕರ್ನಾಟಕ ಪ್ಯಾರಾ ಮೆಡಿಕಲ್ ಬೋರ್ಡ್ ನಡೆಸಿದ ಡೆಂಟಲ್ ಹೈಜಿನ್ ಡಿಪ್ಲೋಮ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಕು.ಜೆರುಷಾ ಜೇಮ್ಸ್ ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ರ‍್ಯಾಂಕ್ ವಿಜೇತರನ್ನು ಅಕಾಡೆಮಿ ಆಫ್ ಲಿಬರಲ್‍ಎಜುಕೇಶನ್‍ನ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾಪ್ರಸಾದ್ ಕೆ.ವಿ., ನಿರ್ದೇಶಕರುಗಳಾದ ಡಾ. ಜ್ಯೋತಿ ಆರ್. ಪ್ರಸಾದ್ ಮತ್ತು ಡಾ.ಅಭಿಜ್ಞಾ ಕೆ. ಆರ್., ಪ್ರಿನ್ಸಿಪಾಲ್ ಡಾ. ಮೋಕ್ಷ ನಾಯಕ್ ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿದರು.