ಚಪ್ಪರದ ಅಡಿಕೆ ಮರ ಬಿದ್ದು ಮೃತ್ಯು
ಅಮಾಸೆಬೈಲು : ಹೊಸಂಗಡಿ ಗ್ರಾಮದ ಅನಗಳ್ಳಿಬೈಲು ಪರಿಸರದ ಹತ್ತು ಸಮಸ್ತರಿಗೆ ಸೇರಿದ ನಾಗ ಮತ್ತು ಹೈಗುಳಿ ದೇವರ ಕಾರ್ಯಕ್ರಮಕ್ಕಾಗಿ ಹಾಕುತ್ತಿದ್ದ ಚಪ್ಪರದ ಅಡಿಕೆ ಮರ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಎ.೪ರಂದು ಬೆಳಗ್ಗೆ 11.30ರ ಸುಮಾರಿಗೆ ನಡೆದಿದೆ.
ಮೃತರನ್ನು ಹೊಸಂಗಡಿ ಗ್ರಾಮದ ಕಡೆಪೇಟೆ ನಿವಾಸಿ ರಾಮಚಂದ್ರ ಭಂಡಾರ್ಕರ್(58) ಎಂದು ಗುರುತಿಸಲಾಗಿದೆ. ಚಪ್ಪರಕ್ಕೆ ಹಾಕುತ್ತಿದ್ದ ಅಡಿಕೆ ಮರದ ಕಂಬವು ಮೇಲಿಂದ ಜಾರಿ ರಾಮಚಂದ್ರರ ಕುತ್ತಿಗೆ ಹಿಂದೆ ಬಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story