ಶಾಂತರಾಮ ಶೆಟ್ಟಿ ಅವರ ಸೇವೆ ಅನನ್ಯ: ಸೀತಾರಾಮ ಶೆಟ್ಟಿ

ಹಳೆಯಂಗಡಿ, ಎ.6: ಪಂಜದಗುತ್ತು ಶಾಂತರಾಮ ಶೆಟ್ಟಿಯವರು ನೇರ ವ್ಯಕ್ತಿತ್ವದವರು, ಸಮಾಜದಲ್ಲಿ ಉತ್ತಮವಾದ ಬಾಂದವ್ಯ ಹೊಂದಿ ಸಮಾಜದ ವಿವಿಧ ರಂಗದಲ್ಲಿ ಕೆಲಸ ಮಾಡಿದರು. ಸಮಾಜಕ್ಕೆ ಅವರ ಸೇವೆ ಅನನ್ಯ ಎಂದು ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸೀತಾರಾಮ ಶೆಟ್ಟಿ ನುಡಿದರು.
ಹಳೆಯಂಗಡಿಯ ಪ್ರಿಯದರ್ಶಿನಿ ಸಹಕಾರ ಸಂಘದಲ್ಲಿ ಏರ್ಪಡಿಸಿದ್ದ ದಿ. ಪಂಜದಗುತ್ತು ಶಾಂತರಾಮ ಶೆಟ್ಟಿ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ನುಡಿನಮನ ಸಲ್ಲಿಸಿದರು.
ಸಾವಿರಾರು ವ್ಯಕ್ತಿಗಳಿಗೆ ಮಾರ್ಗದರ್ಶನ ನೀಡಿ ಅವರು ಸಮಾಜದ ಮುಖ್ಯ ವಾಹಿನಿಯಲ್ಲಿ ಮುಂದುವರಿಯು ವಂತೆ ಮಾಡಿದವರಲ್ಲಿ ಶಾಂತರಾಮಶೆಟ್ಟರು ಒಬ್ಬರು. ಇಂತಹ ಮಹಾನ್ ವ್ಯಕ್ತಿಯನ್ನು ನಾವು ಇಂದು ಸ್ಮರಿಸು ವುದು ಅಗತ್ಯವಾಗಿದೆ ಎಂದು ನುಡಿದರು.
ಸಂಘದ ಅಧ್ಯಕ್ಷರಾದ ಎಚ್. ವಸಂತ್ ಬೆರ್ನಾರ್ಡ್ ಮಾತನಾಡಿ, ಶಾಂತರಾಮ ಶೆಟ್ಟಿಯವರು ಸಹಕಾರ ರಂಗದಲ್ಲಿ ಬಹಳಷ್ಟು ಕೆಲಸ ಮಾಡಿದವರು. ಪ್ರಿಯದರ್ಶಿನಿ ಸಹಕಾರ ಸಂಘ ಸ್ಥಾಪನೆ ಮಾಡಲು ಕೂಡ ಶ್ರೀಯುತರ ಪ್ರೇರಣಾ ಶಕ್ತಿಯೇ ಕಾರಣ ಎಂದು ನುಡಿದರು.
ನಿರ್ದೇಶಕರಾದ ಉಮಾನಾಥ ಶೆಟ್ಟಿಗಾರ್ ಅವರು ಶಾಂತರಾಮ ಶೆಟ್ಟಿಯವರ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು.
ಮುಖ್ಯ ಆತಿಥಿಗಳಾಗಿ ಪುಣೆ ಉದ್ಯಮಿ ಸದಾನಂದ ಶೆಟ್ಟಿ, ಶಾಂತರಾಮ ಶೆಟ್ಟಿಯವರ ಮಕ್ಕಳಾದ ಶರತ್ ಶೆಟ್ಟಿ, ಸರಿತಾ ಶೆಟ್ಟಿ ವೇದಿಕೆಯಲ್ಲಿದ್ದರು.
ನಿರ್ದೇಶಕರುಗಳಾದ ಗೌತಮ್ ಜೈನ್, ಗಣೇಶ್ ಪ್ರಸಾದ್ ದೇವಾಡಿಗ, ಹರೀಶ್ ಪುತ್ರನ್ ಸಸಿಹಿತ್ಲು, ಮಿರ್ಝಾ ಅಹ್ಮದ್, ಜೈಕೃಷ್ಣ, ನವೀನ್ ಸಾಲ್ಯಾನ್ ಪಂಜ, ಪಂಚಾಯತ್ ಸದಸ್ಯರಾದ ಅಬ್ದುಲ್ ಅಝೀಝ್, ಅಬ್ದುಲ್ ಖಾದರ್, ಪದ್ಮಾವತಿ ಶೆಟ್ಟಿ, ನೀತು ನಿರಂಜಲ, ಮಾಜಿ ಸದಸ್ಯರಾದ ಹಮೀದ್ ಸಾಗ್, ಬಶೀರ್ ಸಾಗ್ ಮೊದಲಾದವರು ಇದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ರವರು ವಂದಿಸಿದರು.