ಹರೇಕಳ ಹಾಜಬ್ಬರ ಶಾಲೆಗೆ ಶಿಕ್ಷಣ ಸಾಮಗ್ರಿಗಳ ಕೊಡುಗೆ

ಕೊಣಾಜೆ: ಶಾಲಾ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ದ.ಕ.ಜಿ.ಪಂ ಪ್ರೌಢಶಾಲೆ ನ್ಯೂಪಡ್ಪು, ಹರೇಕಳ ಶಾಲೆಗೆ ಮುತ್ತೂಟ್ ಫೈನಾನ್ಸ್ ಸಿ.ಎಸ್.ಆರ್ ವತಿಯಿಂದ ಮೂರು ಕಪಾಟುಗಳ ಕೊಡುಗೆಯನ್ನು ಶುಕ್ರವಾರ ನೀಡಲಾಯಿತು.
ವಿಜ್ಞಾನ ಪ್ರಯೋಗಾಲಯ ಸಾಮಾಗ್ರಿ, ಗ್ರಂಥಾಲಯ ಪುಸ್ತಕಗಳು ಮತ್ತು ಕ್ರೀಡಾ ಉಪಕರಣಗಳನ್ನು ಸಂಗ್ರಹಿಸಿಡಲು ನೆರವಾಗುವಂತೆ ಪದ್ಮಶ್ರೀ ಪ್ರಶಸ್ತಿ ಗಳಿಸಿರುವ ಅಕ್ಷರ ಸಂತರಾದ ಹರೇಕಳ ಹಾಜಬ್ಬ ಅವರ ಉಪಸ್ಥಿತಿಯಲ್ಲಿ ಕಪಾಟುಗಳನ್ನು ಶಾಲೆಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಹರೇಕಳ ಹಾಜಬ್ಬರವರು ಮಾತನಾಡಿ ಮುತ್ತೂಟ್ ಫೈನಾನ್ಸ್ ನ ಕಾರ್ಯವನ್ನು ಶ್ಲಾಘಿಸಿ ಶಾಲೆಗೆ ಇಂತಹ ಕೊಡುಗೆಗಳು ಬಹಳ ಪ್ರಾಮುಖ್ಯವಾಗಿದ್ದು ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸುತ್ತವೆ ಎಂಬ ನುಡಿಗಳನ್ನಾಡಿ ಭವಿಷ್ಯದಲ್ಲೂ ಶಾಲಾಭಿವೃದ್ಧಿಗೆ ಸಹಕರಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಹರೇಕಳ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಬದ್ರುದ್ದೀನ್, ಪಂಚಾಯತಿ ಸದಸ್ಯರಾದ ಅಬ್ದುಲ್ ಮಜೀದ್, ಬಶೀರ್, ಎಸ್. ಡಿ. ಗೌರವಾಧ್ಯಕ್ಷರಾದ ಮುಸ್ತಫಾ, ಡಾ. ಉಷಾ ಎನ್. ಶಿಕ್ಷಣಾಧಿಕಾರಿ, ಅಕ್ಷರದಾಸೋಹ-ದ.ಕ, ಮುತ್ತೂಟ್ ಫೈನಾನ್ಸ್ ಸಂಸ್ಥೆಯಿಂದ ರೇಷ್ಮಾ ಸುರತ್ಕಲ್ ಕ್ಲಸ್ಟರ್ ಮ್ಯಾನೇಜರ್, ಜ್ಯೋತಿ ದೇರಳಕಟ್ಟೆ ಬ್ರಾಂಚ್ ಮ್ಯಾನೇಜರ್, ಪ್ರಸಾದ್ ಕುಮಾರ್ ಸಿ.ಎಸ್.ಆರ್ ಮ್ಯಾನೇಜರ್, ಸಂಜಯ್ ಕಾಮತ್ , ಶಾಲಾ ಮುಖ್ಯೋಪಾಧ್ಯಾಯರಾದ ಲಕ್ಷ್ಮಣ ಕೆ.ವಿ, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿಯಾದ ಸುರೇಖ ಇವರು ನಿರೂಪಿಸಿದರು.