ಒಕ್ಕೆತ್ತೂರು: ಮದ್ರಸ ಅಧ್ಯಕ್ಷರಾಗಿ ಇಸ್ಮಾಯೀಲ್ ಸೂಪರ್ ಆಯ್ಕೆ

ವಿಟ್ಲ, ಎ.10: ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿಯ ಅಧೀನದ ನೂರುಲ್ ಇಸ್ಲಾಂ ಮದ್ರಸ ಸಮಿತಿಯ ನೂತನ ಸಾಲಿನ ಅಧ್ಯಕ್ಷರಾಗಿ ಇಸ್ಮಾಯೀಲ್ ಸೂಪರ್ ಪುನರಾಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಮಿತಿಯ ಮಹಾಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಶರೀಫ್ ವಿ. ಹಾಗೂ ಬಾತಿಶ್ ಸಿ.ಎಚ್., ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಜಿ., ಜೊತೆ ಕಾರ್ಯದರ್ಶಿಯಾಗಿ ಶರೀಫ್ ಸಿ.ಎಚ್. ಹಾಗೂ ಜಲೀಲ್ ಸಿ.ಎಚ್., ಕೋಶಾಧಿಕಾರಿಯಾಗಿ ಜಬ್ಬಾರ್ ಹಾಗೂ 17 ಮಂದಿಯನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story