ಮಣ್ಣು ಉಳಿಸಿ ಅಭಿಯಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

ಮಣಿಪಾಲ, ಎ.೧೨: ಇಶಾ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾದ ಮಣ್ಣು ಉಳಿಸಿ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಮಣಿಪಾಲದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ, ಸದ್ಗುರು ನಿಗರ್ಸ ರಕ್ಷಣೆಗೆ ದೊಡ್ಡ ಅಭಿಯಾನ ಮಾಡುತ್ತಿದ್ದಾರೆ. ಮೊದಲು ಕಾವೇರಿ ಉಳಿಸಿ ಹಾಗೂ ಈಗ ಮಣ್ಣು ಉಳಿಸಿ ಅಭಿಯಾನ ನಡೆಸುತ್ತಿದ್ದಾರೆ. ಮಣ್ಣಿಗೂ ಮನುಷ್ಯರಿಗೂ ನೇರವಾದ ಸಂಬಂಧ ಇದೆ ಎಂದು ತಿಳಿಸಿದರು.
ನಮ್ಮದು ಮಣ್ಣು ಆಧಾರಿತವಾದ ಬದುಕು. ತಾಯಿ ಗರ್ಭದಿಂದ ಭೂಗರ್ಭ ದವರಿಗೆ ನಮ್ಮ ಬದುಕು ಇದೆ. ಭೂಗರ್ಭ ಸುರಕ್ಷಿತವಾಗಿ ಕಾಪಾಡಬೇಕಾದರೆ ಮಣ್ಣಿನ ರಕ್ಷಣೆ ಅವಶ್ಯಕವಾಗಿದೆ. ಮಣ್ಣು ಉಳಿಸುವುದು ಪ್ರತಿಯೊಬ್ಬರು ನೈತಿಕ ಹಾಗೂ ಅವಶ್ಯಕ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಸುನೀಲ್ ಕುಮಾರ್, ಶಾಸಕ ಕೆ.ರಘುಪತಿ ಭಟ್, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹಾಗೂ ಇಶಾ ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು.