ಯುಡಿಐಡಿ ಕಾರ್ಡ್ ಪಡೆಯಲು ನೋಂದಣಿ ಶಿಬಿರ
ಉಡುಪಿ, ಎ.೧೨: ವಿಕಲಚೇತನರು ಸರಕಾರಿ ಮತ್ತು ಸರಕಾರೇತರ ಸೌಲಭ್ಯ ಪಡೆಯಲು ವಿಶೇಷ ಗುರುತು ಚೀಟಿ (ಯುಡಿಐಡಿ ಕಾರ್ಡ್) ಗಾಗಿ ಎ.೧೮ ಮತ್ತು ೧೯ರಂದು ಉಡುಪಿ ನಗರಸಭಾ ಕಚೇರಿ, ೨೦ ಮತ್ತು ೨೧ರಂದು ಬಡಗುಬೆಟ್ಟು ನಗರಸಭಾ ಉಪಕಚೇರಿ, ೨೨ ಮತ್ತು ೨೫ರಂದು ಮಣಿಪಾಲ ನಗರಸಭಾ ಉಪಕಚೇರಿ, ೨೬ ಮತ್ತು ೨೭ರಂದು ಹೆರ್ಗಾ ನಗರಸಭಾ ಉಪ ಕಚೇರಿ, ೨೮ ಮತ್ತು ೨೯ರಂದು ಮಲ್ಪೆ ನಗರಸಭಾ ಕಚೇರಿ ಹಾಗೂ ಎ.೩೦ ಮತ್ತು ಮೇ ೨ರಂದು ಪುತ್ತೂರು ನಗರಸಭಾ ಕಚೇರಿಯಲ್ಲಿ ನೋಂದಾವಣಿ ಶಿಬಿರ ನಡೆಯಲಿದೆ.
ಉಡುಪಿ ನಗರಸಭಾ ವ್ಯಾಪ್ತಿಯ ವಿಕಲಚೇತನರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
Next Story