ಮ್ಯಾಂಚೆಸ್ಟರ್ ಯುನೈಟೆಡ್ ಅಂಡರ್-12 ತಂಡದ ಪರ ಗೋಲು ಗಳಿಸಿ ತಂದೆಯಂತೆಯೇ ಸಂಭ್ರಮಿಸಿದ ರೊನಾಲ್ಡೊ ಜೂನಿಯರ್

photo:twitter
ಮ್ಯಾಡ್ರಿಡ್: ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ಪೋರ್ಚುಗಲ್ ತಂಡದ ಸ್ಟಾರ್ ಫಾರ್ವರ್ಡ್ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪುತ್ರ ಕ್ರಿಸ್ಟಿಯಾನೊ ರೊನಾಲ್ಡೊ ಜೂನಿಯರ್, ಸ್ಪೇನ್ನಲ್ಲಿ ನಡೆದ ಯೂತ್ ಟೂರ್ನಮೆಂಟ್ ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ನ ಅಂಡರ್-12 ತಂಡಕ್ಕಾಗಿ ಎರಡನೇ ಬಾರಿ ಗೋಲು ಗಳಿಸಿದರು. ಗೋಲು ಗಳಿಸಿದ ಬಳಿಕ ತನ್ನ ತಂದೆಯೇ ರೀತಿಯಲ್ಲೇ ಸಂಭ್ರಮಾಚರಿಸಿದರು.
ಗಿರೋನೆಸ್ ಸಬತ್ ತಂಡದ ವಿರುದ್ಧ 5-0 ಗೋಲುಗಳಿಂದ ಗೆದ್ದ ಪಂದ್ಯದಲ್ಲಿ 11 ವರ್ಷ ವಯಸ್ಸಿನ ರೊನಾಲ್ಡೊ ಜೂನಿಯರ್ ದ್ವಿತೀಯಾರ್ಧದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕೆ ಇಳಿದರು. ಪಂದ್ಯದ 68 ನೇ ನಿಮಿಷದಲ್ಲಿ ರೊನಾಲ್ಡೊ ಜೂನಿಯರ್ ಆಕರ್ಷಕ ಗೋಲು ಗಳಿಸಿದರು. ಆ ನಂತರ ತಮ್ಮ ತಂದೆಯ ಸಾಂಪ್ರದಾಯಿಕ ಸಂಭ್ರಮಾಚರಣೆಯನ್ನು ಅನುಸರಿಸಿದರು.
ಯುನೈಟೆಡ್ನ ಅಕಾಡೆಮಿಗೆ ಸೇರ್ಪಡೆಗೊಂಡಿರುವ ರೊನಾಲ್ಡೊ ಜೂನಿಯರ್, ವೆಸ್ಟ್ ಬ್ರಾಮ್ವಿಚ್ ಅಲ್ಬಿಯನ್ ವಿರುದ್ಧ ಕೇವಲ 15 ದಿನಗಳ ಹಿಂದೆ ಯುನೈಟೆಡ್ ಕ್ಲಬ್ಗಾಗಿ ತನ್ನ ಚೊಚ್ಚಲ ಗೋಲು ಗಳಿಸಿದ್ದರು.
ಮತ್ತೊಂದೆಡೆ, ಕ್ರಿಸ್ಟಿಯಾನೊ ರೊನಾಲ್ಡೊ ಕಳೆದ ಬೇಸಿಗೆಯಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ಗೆ ಮರು-ಸೇರ್ಪಡೆಯಾಗಿದ್ದರು. ಮ್ಯಾಡ್ರಿಡ್ ಕ್ಲಬ್ ಪರ ಒಂಬತ್ತು ವರ್ಷಗಳ ಕಾಲ ಆಡಿದ್ದ ರೊನಾಲ್ಡೊ ನಾಲ್ಕು ಚಾಂಪಿಯನ್ಸ್ ಲೀಗ್ ಹಾಗೂ ಎರಡು ಲಾ ಲಿಗಾ ಪ್ರಶಸ್ತಿಗಳನ್ನು ಗೆದ್ದಿದ್ದರು.
Cristiano Ronaldo Jr. scores for #mufc U12s against EF Gironès Sabat
— utdreport Academy (@utdreportAcad) April 13, 2022
Of course he pulled out his dad's iconic celebration pic.twitter.com/YxfPZtc9Vb