ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ವಿರುದ್ಧ ತನಿಖೆಗೆ ಆದೇಶಿಸಿದ ಚುನಾವಣಾ ಆಯೋಗ

ಗುವಾಹಟಿ: ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪದ ಕುರಿತು ಅಸ್ಸಾಂ ರಾಜ್ಯ ಚುನಾವಣಾ ಆಯೋಗವು ತನಿಖೆಗೆ ಆದೇಶಿಸಿದೆ.
ಈ ಸಂಬಂಧ ಪ್ರತಿಪಕ್ಷ ಅಸೋಮ್ ರಾಷ್ಟ್ರೀಯ ಪರಿಷತ್ (ಎಜೆಪಿ) ದೂರು ದಾಖಲಿಸಿತ್ತು. ಆಯೋಗವು ಕಮ್ರೂಪ್ (ಮೆಟ್ರೊ) ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ತನಿಖೆ ನಡೆಸಲು ಸೂಚಿಸಿದೆ.
ಎಪ್ರಿಲ್ 22 ರಂದು ಗುವಾಹಟಿ ಮುನ್ಸಿಪಲ್ ಕೌನ್ಸಿಲ್ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ, ಸಿಎಂ ಶರ್ಮಾ ಅವರು ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸುವ ಒರುನೊಡೊಯ್ ಯೋಜನೆಯ ಫಲಾನುಭವಿಗಳ ಪಟ್ಟಿಗೆ ಪ್ರತಿ ವಾರ್ಡ್ನಿಂದ 1,000 ಜನರನ್ನು ಸೇರಿಸುವುದಾಗಿಯೂ, ಪಕ್ಷದ (ಬಿಜೆಪಿ) ಅಭ್ಯರ್ಥಿಗಳಿಗೆ ಮತ ಹಾಕಿ ಅಧಿಕಾರ ತಂದರೆ ಪ್ರತಿ ವಾರ್ಡ್ಗೆ ಅಭಿವೃದ್ಧಿ ಚಟುವಟಿಕೆಗಳಿಗೆ 10 ಕೋಟಿ ರೂ. ನೀಡಲಾಗುವುದು ಎಂದು ಘೋಷಿಸುವ ಮೂಲಕ ಮತದಾರರಿಗೆ ಆಮಿಷ ಒಡ್ಡಿದ್ದರು ಎಂದು ಎಜೆಪಿ ಅಧ್ಯಕ್ಷ ಸಂಜೀವ್ ಬೋರಾ ಆರೋಪಿಸಿದ್ದಾರೆ.
Next Story