ಸ್ಕೂಟರ್ ಅಪಘಾತ: ಗಾಯಾಳು ಮೃತ್ಯು
ಬ್ರಹ್ಮಾವರ : ಚಾಂತಾರು ಕೃಷಿಕೇಂದ್ರದ ಬಳಿ ಎರಡು ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಕುಂಜಿಬೆಟ್ಟುವಿನ ಡಾ.ರಮಾಕಾಂತ ಆಚಾರ್ಯ(೬೮) ಎಂಬವರ ಪತ್ನಿ ರೇವತಿ ಆಚಾರ್ಯ(೬೨) ಎಂದು ಗುರುತಿಸಲಾಗಿದೆ. ಇವರು ನೀಲಾವರ ಕಡೆಯಿಂದ ಬ್ರಹ್ಮಾವರ ಕಡೆಗೆ ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಬೈಕ್, ಢಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಯಿತು.
ಇದರಿಂದ ರಸ್ತೆಗೆ ಬಿದ್ದು ಇಬ್ಬರು ಗಾಯಗೊಂಡಿದ್ದು, ಅದರಲ್ಲಿ ರೇವತಿ ಆಚಾರ್ಯ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಎ.೨೧ರಂದು ಸಂಜೆ ೭:೩೦ಕ್ಕೆ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story