ಮೇ 13ರಂದು ಸಮಸ್ತ ಉಲಮಾ ಒಕ್ಕೂಟದ ರಾಜ್ಯ ಮಟ್ಟದ ಸೌಹಾರ್ದ ಸಮಾವೇಶ: ಪೂರ್ವಭಾವಿ ಸಭೆ
ಮಂಗಳೂರು, ಎ.25: ಕೋಮು ಸೌಹಾರ್ದದ ಸಂದೇಶ ಹಾಗೂ ಇಸ್ಲಾಂ ಪ್ರತಿಪಾದಿಸುವ ಶಾಂತಿಯ ಸಂದೇಶವನ್ನು ಸರ್ವ ಧರ್ಮೀಯರಿಗೆ ತಿಳಿಸಿಕೊಡುವ ಉದ್ದೇಶದಿಂದ ಎಸ್ಕೆಎಸ್ಸೆಸ್ಸೆಫ್ ಕೇಂದ್ರೀಯ ಸಮಿತಿಯ ನೇತೃತ್ವದಲ್ಲಿ ರಾಜ್ಯ ಮಟ್ಟದ ಸೌಹಾರ್ದ ಸಮಾವೇಶವನ್ನು ಮೇ 13ರಂದು ಹಮ್ಮಿಕೊಳ್ಳಲಾಗಿದೆ. ಇದರ ಪೂರ್ವಭಾವಿ ಸಭೆಯು ಬಂಟ್ವಾಳದಲ್ಲಿ ಶನಿವಾರ ನಡೆಯಿತು. ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ಪಂದಲ್ಲೂರು ಹಾಗೂ ಪ್ರಧಾನ ಕಾರ್ಯದರ್ಶಿ ರಶೀದ್ ಫೈಝಿ ವೇಳ್ಳಾಯಿಕೋಡು ಸಭೆಗೆ ನೇತೃತ್ವ ನೀಡಿದರು.
ಜಿಲ್ಲೆ ಪ್ರಮುಖ ನಾಯಕರಾದ ಸೈಯದ್ ಅಮೀರ್ ತಂಙಳ್ ಕಿನ್ಯ, ಎಸ್.ಬಿ.ಮುಹಮ್ಮದ್ ದಾರಿಮಿ, ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಅನೀಸ್ ಕೌಸರಿ, ಸ್ವದಕತುಲ್ಲಾ ಫೈಝಿ, ಶಂಸುದ್ದೀನ್ ದಾರಿಮಿ, ಅಬ್ದುಲ್ ರಶೀದ್ ರಹ್ಮಾನಿ, ಅಬೂ ಸ್ವಾಲಿಹ್ ಫೈಝಿ, ರಿಯಾಝ್ ರಹ್ಮಾನಿ, ಜಮಾಲುದ್ದೀನ್ ದಾರಿಮಿ, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಸಿದ್ದೀಕ್ ಅಬ್ದುಲ್ ಖಾದರ್, ಮೂಸಾ ಶರೀಫ್, ಹನೀಫ್ ಧೂಮಳಿಕೆ, ಹಕೀಂ ಪರ್ತಿಪ್ಪಾಡಿ, ಹಾರೂನ್ ರಶೀದ್ ಬಂಟ್ವಾಳ, ಇಸ್ಮಾಯೀಲ್ ಅರಬಿ, ಸಿ.ಎಚ್.ಇಬ್ರಾಹೀಂ ಮುಸ್ಲಿಯಾರ್, ಮುಹಮ್ಮದ್ ಫೈಝಿ ಕಜೆ, ಹಾರಿಸ್ ಕೌಸರಿ, ಮಜೀದ್ ದಾರಿಮಿ, ಆರಿಫ್ ಬಡಕಬೈಲ್, ಬಾತಿಷಾ ಪಾಟ್ರಕ್ಕೋಡಿ ಸಭೆಯಲ್ಲಿ ಉಪಸ್ಥಿತರಿದ್ದರು.
ಎಸ್ಕೆಎಸ್ಸೆಸ್ಸೆಫ್ ಕೇಂದ್ರೀಯ ಸಮಿತಿಯ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ ತಿಂಗಳಾಡಿ ಸ್ವಾಗತಿಸಿ, ವಂದಿಸಿದರು.