ಹಲ್ಲೆ ಪ್ರಕರಣ: ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

ಉಳ್ಳಾಲ: ಸೋಮೇಶ್ವರ ದಲ್ಲಿ ಎರಡು ತಿಂಗಳ ಹಿಂದೆ ಯುವಕನ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮೆರೆಸಿಕೊಂಡಿದ್ದ ಉಳ್ಳಾಲ ಕಡಪ್ಪುರ ನಿವಾಸಿ ಸಮೀರ್ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಈತ ತಲಪಾಡಿ ಗಡಿ ಪ್ರದೇಶದಲ್ಲಿ ತಲ್ವಾರ್ ತೋರಿಸಿ ಬೆದರಿಕೆ ಯೊಡ್ಡಿದ್ದ .ಅಲ್ಲದೇ ಸೋಮೇಶ್ವರ ದಲ್ಲಿ ಯುವಕನೊಬ್ಬ ನಿಗೆ ನಾಲ್ವರ ತಂಡಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿತ್ತು.
ಈ ಪ್ರಕರಣ ಕ್ಕೆ ಸಂಬಂಧಿಸಿ ದಂತೆ ಮಂಜೇಶ್ವರ ಖಾದರ್ ಈ ಹಿಂದೆ ಬಂಧನ ಆಗಿತ್ತು.ಇದೇ ಪ್ರಕರಣ ಕೆ ಸಂಬಂಧಿಸಿ ಬುಧವಾರ ಸಮೀರ್ ಪಂಪ್‌ವೆಲ್ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿ ಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ
Next Story