ಡಾ. ಟಿಎಂಎ ಪೈ ಕೊಂಕಣಿ ಪುಸ್ತಕ ಪುರಸ್ಕಾರಕ್ಕೆ ಅಕಲ್ಪಿತಾ ದೇಸಾಯಿ ‘ಕಾಲಿದಾಸ ಪ್ರತಿಭಾ’ ಆಯ್ಕೆ
ಉಡುಪಿ : ಮಣಿಪಾಲದ ಡಾ.ಟಿ.ಎಂ.ಎ.ಪೈ ಫೌಂಡೇಷನ್ ಪ್ರತಿ ವರ್ಷ ನೀಡುವ ಡಾ.ಟಿ.ಎಂ.ಎ.ಪೈ ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರಕ್ಕೆ 2020ನೇ ಸಾಲಿಗೆ ಗೋವಾ ಕಾಣಕೋಣದ ಅಕಲ್ಪಿತಾ ರಾವೂತ್ ದೇಸಾಯಿ ಇವರ ‘ಕಾಲಿದಾಸ ಪ್ರತಿಭಾ’ ಆಯ್ಕೆಯಾಗಿದೆ.
೨೦೧೯ರಲ್ಲಿ ಪ್ರಕಟವಾದ ಈ ಪುಸ್ತಕವು ದೇವನಾಗರಿ ಲಿಪಿಯಲ್ಲಿದೆ. ಪುಸ್ತಕ ಪುರಸ್ಕಾರವು ೨೫,೦೦೦ರೂ. ನಗದು ಹಾಗೂ ಪ್ರಶಂಸಾ ಪತ್ರವನ್ನು ಒಳಗೊಂಡಿದೆ. ಇದರೊಂದಿಗೆ ಪ್ರಶಂಸಾರ್ಹತಾ ಪುರಸ್ಕಾರಕ್ಕಾಗಿ ಎರಡು ಕೊಂಕಣಿ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದ್ದು, ಇವುಗಳಿಗೆ ತಲಾ 10 ಸಾವಿರ ರೂ. ನಗದು ಹಾಗೂ ಪ್ರಶಂಸಾ ಪತ್ರವನ್ನು ನೀಡಲಾಗುತ್ತದೆ.
ಬಜಪೆಯ ರೋಶನ್ ಸಿಕ್ವೇರಾ (ರೋಶು ಬಜ್ಪೆ) ಇವರ ೨೦೧೮ರಲ್ಲಿ ಪ್ರಕಟಗೊಂಡ ಕೊಂಕಣಿ ಕವಿತಾ ಸಂಗ್ರಹದ ‘ತೀಂತ್ ಜಾಲೆಂ ರಗತ್’ ಕನ್ನಡ, ದೇವನಾಗರಿ ಲಿಪಿಯಲ್ಲಿದೆ. ಮಂಗಳೂರಿನ ಮೆಲ್ವಿನ್ ರೋಡಿಗ್ರಸ್ ಅವರ ಕವಿತಾ ಪ್ರಕಾಶನ ಇದನ್ನು ಪ್ರಕಟಿಸಿದೆ.
ಕೇರಳ ರಾಜ್ಯ ಕೊಚ್ಚಿಯ ಎನ್.ಬಾಲಕೃಷ್ಣ ಮಯ್ಯ ಇವರ ಕೊಂಕಣಿ ಕಲಿತಾ ಸಂಕಲನ ‘ಅತ್ಮಗತ’ ಎಂಬ ೨೦೧೯ರಲ್ಲಿ ಪ್ರಕಟಗೊಂಡ ಕೃತಿಯೂ ಈ ಪುರಸ್ಕಾರ ಕ್ಕೆ ಆಯ್ಕೆಯಾಗಿದೆ. ಈ ಪುಸ್ತಕ ದೇವನಾಗರಿ ವಿರಿಯಲ್ಲಿತದ್ದು, ಕೊಚ್ಚಿಯ ಹಿಮಾಲಯ ಪ್ರಕಾಶನದಿಂದ ಪ್ರಕಟಗೊಂಡಿದೆ ಎಂದು ಮಣಿಪಾಲದ ಡಾ. ಟಿಎಂಎ ಪೈ ಫೌಂಡೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.