ಮಂಗಳೂರು: ಮೇ 14 - 15ರಂದು ರಾಷ್ಟ್ರ ಮಟ್ಟದ ಫಿಡೇ ಚೆಸ್ ಪಂದ್ಯಾಟ
ಮಂಗಳೂರು : ಕರಾವಳಿಯಲ್ಲಿ ಚೆಸ್ ಕ್ರೀಡೆಯನ್ನು ಉತ್ತೇಜಿಸಲು ದಕ್ಷಿಣ ಕನ್ನಡ ಚೆಸ್ ಅಸೋಸಿಯೇಶನ್ ( ರಿ) ಮಂಗಳೂರು ಆಸ್ತಿತ್ವಕ್ಕೆ ಬಂದಿದ್ದು, ಇದರ ವತಿಯಿಂದ ಮೇ 14 ಮತ್ತು 15ರಂದು ಮಂಗಳೂರಿನ ಪುರಭವನದಲ್ಲಿ ರಾಷ್ಟ್ರ ಮಟ್ಟದ ಫಿಡೆ ವೇಗದ ನಡೆಯ ಚೆಸ್ ಪಂದ್ಯ ನಡೆಯಲಿದೆ.
ರಾಷ್ಟ್ರಮಟ್ಟದ ಸ್ಪರ್ಧಾಳುಗಳು ಸಹಿತ ಸುಮಾರು 400 ಸ್ಪರ್ದಿಗಳು ಭಾಗವಹಿಸಲಿದ್ದಾರೆ ಎಂದು ಸಂಘಟನೆ ಯ ಜಿಲ್ಲಾ ಅಧ್ಯಕ್ಷ ರಮೇಶ್ ಕೋಟೆ ಸುದ್ದಿ ಗೋಷ್ಠಿಯಲ್ಲಿಂ ದು ತಿಳಿಸಿದ್ದಾರೆ.
ಪಂದ್ಯಾಟವು 2ಲಕ್ಷ ಮೊತ್ತ ಹಾಗೂ ವಿವಿಧ ಟೋಫಿಗಳನ್ನು ಒಳಗೊಂಡಿದೆ. ಎರಡು ದಿವಸಗಳಲ್ಲಿ (9rounds) ಚೆಸ್ ಪಂದ್ಯಾವಳಿ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆ ಚೆಸ್ ಪಂದ್ಯಾಟಗಳಲ್ಲಿ ಹಲವಾರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಆಟಗಾರರನ್ನು ಪರಿಚಯಿಸಿದೆ. ಮಂಗಳೂರಿನಲ್ಲಿ ಹಲವಾರು ರಾಷ್ಟ್ರೀಯ | ರೇಟೆಡ್ ಪಂದ್ಯಾವಳಿಗಳು ನಡೆದಿವೆ. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಚೆಸ್ ಪಂದ್ಯಾವಳಿಗಳು ಕಡಿಮೆಯಾಗಿದ್ದು ಇದನ್ನು ಮತ್ತಷ್ಟು ಉತ್ತೇಜಿಸಲು ಚೆಸ್ ಅಸೋಸಿಯೇಶನ್ ಆಸ್ತಿತ್ವಕ್ಕೆ ಬಂದಿದ್ದು, ಇದೀಗ ರಾಷ್ಟ್ರಮಟ್ಟದ ಫಿಡೆ ಚೆಸ್ ಪಂದ್ಯಾ ಟಗಳನ್ನು ನಡೆಸಲಾಗುತ್ತಿದೆ ಎಂದು ರಮೇಶ್ ಕೋಟೆ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಕಾರ್ಯದರ್ಶಿ ಅಭಿಷೇಕ್ ಕಟ್ಟೇಮಾರ್, ಕೋಶಾಧಿಕಾರಿ ಪೂರ್ಣಿಮಾ ಎಸ್ ಆಳ್ವ, ಸತ್ಯ ಪ್ರಸಾದ್ ಮತ್ತು ವಾಣಿ ಎಸ್ ಪಣಿಕ್ಕರ್ ಉಪಸ್ಥಿತರಿದ್ದರು.