Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. 'ದೇಶದ್ರೋಹ' ಕಾನೂನಿಗೆ ತಾತ್ಕಾಲಿಕ ತಡೆ...

'ದೇಶದ್ರೋಹ' ಕಾನೂನಿಗೆ ತಾತ್ಕಾಲಿಕ ತಡೆ ನೀಡಲು ಕಾರಣರಾದ ನಿವೃತ್ತ ಸೇನಾಧಿಕಾರಿ ‌ಎಸ್‌ ಜಿ ಒಂಬತ್ಕೆರೆ

ವಾರ್ತಾಭಾರತಿವಾರ್ತಾಭಾರತಿ12 May 2022 5:01 PM IST
share
ದೇಶದ್ರೋಹ ಕಾನೂನಿಗೆ ತಾತ್ಕಾಲಿಕ ತಡೆ ನೀಡಲು ಕಾರಣರಾದ ನಿವೃತ್ತ ಸೇನಾಧಿಕಾರಿ ‌ಎಸ್‌ ಜಿ ಒಂಬತ್ಕೆರೆ

ಮಂಗಳೂರು: 124ಎ ಅಥವಾ ದೇಶದ್ರೋಹ ಕಾನೂನಿನ ವಿರುದ್ಧ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌, ಸದ್ಯ, ಮುಂದಿನ ಪರಿಶೀಲನೆವರೆಗೂ ದೇಶದ್ರೋಹ ಆರೋಪದಡಿ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.  

ಇತ್ತೀಚಿನ ಕೆಲವು ವರ್ಷಗಳಿಂದ ವಸಾಹತುಶಾಹಿ ಕಾಲದ ʼ124ಎʼ ಅಥವಾ ʼದೇಶದ್ರೋಹʼ ಕಾನೂನಿನ ಬಗ್ಗೆ ಅಪಸ್ವರಗಳು ಏಳುತ್ತಿವೆ. ಸರ್ಕಾರವು ಬ್ರಿಟೀಷರ ಕಾಲದ ಈ ಕಾನೂನನ್ನು ತನ್ನ ಟೀಕಾಕಾರರ ವಿರುದ್ಧ ಬಳಸುತ್ತಿದೆ ಎಂಬ ಆರೋಪಗಳು ಇತ್ತೀಚಿನ ವರ್ಷಗಳಲ್ಲಿ ವ್ಯಾಪಕವಾಗಿ ಕೇಳತೊಡಗಿದೆ. ಸರ್ಕಾರ, ಸರ್ಕಾರದ ನೀತಿ, ಅದರ ಮುಖ್ಯಸ್ಥರ ವಿರುದ್ಧ ನಡೆದ ಪ್ರತಿಭಟನೆ ಮತ್ತು ಹೋರಾಟಗಳ ವಿರುದ್ಧ ದೇಶದ್ರೋಹ ಪ್ರಕರಣಗಳನ್ನು ದಾಖಲಿಸಲಾಗಿದೆ. 2014ರ ನಂತರ, ಅಂದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಂತಹ ಪ್ರವೃತ್ತಿ ಹೆಚ್ಚಾಗಿದೆ. ಸಿಎಎ ವಿರುದ್ಧ ನಡೆದ ಹೋರಾಟಗಳ ಸಂದರ್ಭದಲ್ಲಿ 3,800 ಕ್ಕೂ ಅಧಿಕ ದೇಶದ್ರೋಹ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ಹೋರಾಟವನ್ನು ಮಣಿಸಲು ಈ ಕಾನೂನನ್ನು ಬಳಸಲಾಗುತ್ತಿದೆ ಎಂಬುದಕ್ಕೆ ಪುಷ್ಟಿ ನೀಡಿದಂತಾಗಿದೆ. 

ಇದೀಗ ಈ ಕಾನೂನಿನ ಸಾಂವಿಧಾನಿಕ ಮಾನ್ಯತೆಯನ್ನು ಸುಪ್ರೀಂ ಕೋರ್ಟ್‌ ಪರಿಶೀಲನೆ ನಡೆಸುತ್ತಿದ್ದು, ದೇಶದಲ್ಲಿ ದೇಶದ್ರೋಹ ಕಾನೂನಿನ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಪ್ರಮುಖ ಕಾರಣಕರ್ತರಾದವರು ನಿವೃತ್ತ ಮೇಜರ್‌ ಜನರಲ್ ಸುಧೀರ್‌ ಜಿ. ಒಂಬತ್ಕೆರೆ. ಇವರು ದಕ್ಷಿಣ ಕನ್ನಡದ ಒಂಬತ್ಕೆರೆ ಮೂಲದವರು ಎನ್ನುವ ವಿಚಾರ ಬಹುಷ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. 

ಭಾರತೀಯ ಸೇನೆಯಲ್ಲಿ ಸುಮಾರು ದಶಕಗಳ ಕಾಲ ಸೇವೆ ಸಲ್ಲಿಸಿರುವ ಒಂಬತ್ಕೆರೆ, ಲಡಾಖ್‌ ಭಾಗದಲ್ಲೇ ಸುಮಾರು ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಲಡಾಖ್‌ನಲ್ಲಿ 5 ವರ್ಷಗಳ ಕಾಲ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಭಾರತದ ರಾಷ್ಟ್ರಪತಿಗಳು 1993 ರಲ್ಲಿ ಅವರಿಗೆ ʼವಿಶಿಷ್ಟ ಸೇವಾ ಪದಕʼವನ್ನು ನೀಡಿ ಗೌರವಿಸಿದ್ದಾರೆ. ಶಿಸ್ತು ಮತ್ತು ವಿಜಿಲೆನ್ಸ್ ನ ಹೆಚ್ಚುವರಿ ಡೈರೆಕ್ಟರ್ ಜನರಲ್ ಆಗಿ ಅವರು ಭಾರತ ಸೇನೆಯಿಂದ ನಿವೃತ್ತರಾಗಿದ್ದಾರೆ. 

ಸಿವಿಲ್‌ ಇಂಜಿನಿಯರ್‌ ನಲ್ಲಿ ಎಂಟೆಕ್‌ ಮಾಡಿ, ಐಐಟಿ ಮದ್ರಾಸ್‌ನಲ್ಲಿ ಸ್ಟ್ರಕ್ಚರಲ್ ಡೈನಾಮಿಕ್ಸ್‌ನಲ್ಲಿ ವಿಷಯದಲ್ಲಿ ತಮ್ಮ ಪಿಹೆಚ್‌ಡಿಯನ್ನೂ ಪೂರ್ಣಗೊಳಿಸಿರುವ ಒಂಬತ್ಕೆರೆಯವರಿಗೆ 1982 ರಲ್ಲಿ ಖರ್ದುಂಗ್ಲಾ ಬಳಿ 5,603-ಮೀ (18,300-ಅಡಿ) ಎತ್ತರದಲ್ಲಿ ವಿಶ್ವದ ಅತಿ ಎತ್ತರದ ಮೋಟಾರು ಸೇತುವೆಯ ವಿನ್ಯಾಸ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ನೀಡಲಾಗಿತ್ತು. ಈ ಸೇತುವೆ ನಿರ್ಮಾಣವು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ. 

ಸೇನೆಯಿಂದ ನಿವೃತ್ತಗೊಂಡು ಬಂದ ಒಂಬತ್ಕೆರೆಯವರು ತಮ್ಮ ನಿವೃತ್ತಿ ಜೀವನವನ್ನು ಕಳೆಯಲು ಆಯ್ದುಕೊಂಡದ್ದು ಸಾಂಸ್ಕೃತಿಕ ನಗರಿ ಮೈಸೂರನ್ನು. ಭಾರತೀಯ ಸೇನೆಯಿಂದ ನಿವೃತ್ತಿಯಾದವರು ಸುಮ್ಮನೇ ಕೂರಲಿಲ್ಲ, ಬದಲಾಗಿ ಭಾರತದ ಸಂವಿಧಾನವನ್ನು ಉಳಿಸುವ, ಪರಿಸರ ಉಳಿಸುವ ನಾಗರಿಕ, ಗ್ರಾಹಕ ಹಕ್ಕುಗಳನ್ನು ಉಳಿಸುವ ಹೋರಾಟಗಳಲ್ಲಿ ನಿರಂತರ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಮೈಸೂರಿನಲ್ಲಿ ಪ್ರಗತಿಪರ ಚಳವಳಿಯಲ್ಲಿ ಸಕ್ರಿಯವಾಗಿ ಇರುವಿಕೆ ತೋರಿಸಿದ ಒಂಬತ್ಕೆರೆಯವರು ಆರಂಭದಿಂದಲೂ ಹೋರಾಟಗಳಲ್ಲಿ, ಜನಪರ ಚಳುವಳಿಗಳಲ್ಲಿ ತೋರುತ್ತಿದ್ದ ಬದ್ಧತೆಯನ್ನು ಅವರ ಒಡನಾಡಿಗಳು ಈಗಲೂ ಬೆರಗಿನಿಂದ ವಿವರಿಸುತ್ತಾರೆ. ಅವರ ಒಡನಾಡಿ ಪಿಯುಸಿಎಲ್‌ ಹೋರಾಟಗಾರ, ರಾಷ್ಟ್ರೀಯ ಪರಿಷತ್‌ ಸದಸ್ಯ ಲಕ್ಷ್ಮೀನಾರಾಯಣ ಅವರ ಪ್ರಕಾರ ಒಂಬತ್ಕೆರೆ ಅವರು ಒಬ್ಬ ಅಪ್ರತಿಮ ಪ್ರಜಾತಂತ್ರವಾದಿ. 

ಸ್ಥಳೀಯ ರೈತರಿಗೆ ಮಾರಕವಾಗುವ ಬಿಎಂಐಸಿ ಅಥವಾ ಮೈಸೂರು-ಬೆಂಗಳೂರು ಕಾರಿಡಾರ್‌ ಯೋಜನೆಯನ್ನು ವಿರೋಧಿಸಿ ನಡೆದ ಚಳುವಳಿಯಲ್ಲಿ ಮುಂದಾಳತ್ವ ವಹಿಸಿದ ಅವರ ವೈಖರಿಯನ್ನು ಅಂದು ಹೋರಾಟದ ಭಾಗವಾಗಿದ್ದ ಸಿರಿಮನೆ ನಾಗರಾಜು ಅವರು ಅವರದೇ ಶೈಲಿಯಲ್ಲಿ ವಿವರಿಸುತ್ತಾರೆ. ಈ ಕಾರಿಡಾರ್‌ ಯೋಜನೆಯ ವಿರುದ್ಧ ಎಸ್.ಜಿ ಒಂಬತ್ಕೆರೆ ಅವರು ಸರಿಸುಮಾರು ಮೂರುವರೆ ವರ್ಷಗಳ ಕಾಲ ಆರಂಭದ ಅದೇ ಬದ್ಧತೆಯಿಂದ ಸಕ್ರಿಯವಾಗಿ ಚಳವಳಿಯಲ್ಲಿ ಪಾಲ್ಗೊಂಡಿದ್ದರು ಎಂದು ಎರಡು ದಶಕಗಳ ಹಿಂದಿನ ಕತೆಯನ್ನು ನಾಗರಾಜು ಅವರು ಬಿಚ್ಚಿಡುತ್ತಾರೆ.  ಹೀಗೆ ಜನಪರ ಹಾಗೂ ಪ್ರಗತಿಪರ ಚಳುವಳಿಗಳಲ್ಲಿ ನಿರಂತರ ಭಾಗಿಯಾಗುತ್ತಾ ಬಂದಿರುವ ಒಂಬತ್ಕೆರೆ ಅವರು, ಪಿಯುಸಿಎಲ್‌ ನ ಅಜೀವ ಸದಸ್ಯರು. 

ಮಾತ್ರವಲ್ಲ, ಭ್ರಷ್ಟಾಚಾರ, ಗ್ರಾಹಕ ಹಕ್ಕುಗಳು, ಪರಿಸರ, ಸಂವಿಧಾನ ವಿಚಾರಗಳಲ್ಲೂ ಎಸ್‌.ಜಿ ಒಂಬತ್ಕೆರೆ ಅವರು ಸರ್ಕಾರವನ್ನು ನಿರಂತರ ಎಚ್ಚರಿಸುತ್ತಾ ಬಂದವರು. ದೇಶದ ಪ್ರಮುಖ ನಿಯತಕಾಲಿಕೆಗಳಿಗೆ ಅಂಕಣಗಳನ್ನು ಬರೆಯುತ್ತಾ ಬಂದಿರುವ ಅವರು, ಸೈನ್ಯವನ್ನು ರಾಜಕೀಯಕ್ಕೆ ಬಳಸುವುದನ್ನು ಖಂಡಾತುಂಡವಾಗಿ ವಿರೋಧಿಸುತ್ತಾರೆ. ಪುಲ್ವಾಮ, ಬಾಲಾಕೋಟ್‌, ಸರ್ಜಿಕಲ್‌ ಸ್ಟ್ರೈಕ್‌ ಮೊದಲಾದ ವಿಚಾರಗಳನ್ನು ಭಾವನಾತ್ಮಕವಾಗಿ ರಾಜಕೀಯಗೊಳಿಸಿದನ್ನು ಟೀಕಿಸಿರುವ ಅವರು, 150ಕ್ಕೂ ಹೆಚ್ಚು ಗಣ್ಯರೊಂದಿಗೆ  ಸೈನ್ಯವನ್ನು ಮುಂದಿಟ್ಟು ಮತ ಕೇಳುವುದನ್ನು ವಿರೋಧಿಸಿ ರಾಷ್ಟ್ರಪತಿಗಳಿಗೆ ಪತ್ರವನ್ನೂ ಬರೆದಿದ್ದರು.  

“ವಲಸಿಗರಿಗೆ ಪೌರತ್ವವನ್ನು ನೀಡುವುದು ತಾರತಮ್ಯ ರಹಿತವಾಗಿರಬೇಕು. ಏಕೆಂದರೆ ಅದೇ ನಮ್ಮ ಸಂವಿಧಾನದ ಸ್ವರೂಪ ಮತ್ತು ಆತ್ಮ” ಎಂದು ನಂಬುವ ಒಂಬತ್ಕೆರೆ ಅವರು ಸಿಎಎ ವಿರೋಧಿ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು, ಹಾಗೂ ಈ ವಿಷಯದಲ್ಲಿ ಹಲವು ಲೇಖನಗಳನ್ನು ಪ್ರಕಟಿಸಿದ್ದರು. ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸುವುದು ಪ್ರಜೆಗಳ ಖಾಸಗೀತನಗಳ ಉಲ್ಲಂಘನೆಯಾಗುತ್ತದೆ ಎಂದು ನಂಬುವ ಮೇಜರ್‌ ಜನರಲ್‌, ಅದನ್ನು ಕೂಡಾ ತೀವ್ರವಾಗಿ ವಿರೋಧಿಸಿದ್ದರು. ಅಲ್ಲದೆ, ಇತ್ತೀಚೆಗೆ ಹರಿದ್ವಾರ ಮತ್ತು ದೆಹಲಿಯಲ್ಲಿ ಆಯೋಜಿಸಲಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಸ್ಲಿಮರ ವಿರುದ್ಧ ಮಾಡಿದ ದ್ವೇಷ ಭಾಷಣಗಳ ವಿರುದ್ಧ ತನಿಖೆ ನಡೆಸುವಂತೆ ಕೋರಿ ಭಾರತೀಯ ಸೇನೆಯ ಇತರೆರಡರು ನಿವೃತ್ತ ಅಧಿಕಾರಿಗಳೊಂದಿಗೆ ಸುಪ್ರೀಂ ಕೋರ್ಟ್‌ ಮೊರೆಯನ್ನು ಹೋಗಿದ್ದಾರೆ. 

ಮೈಸೂರು ಹೆರಿಟೇಜ್ ಕಮಿಟಿ ಮತ್ತು ಮೈಸೂರಿನ ಗ್ರಾಹಕ ವೇದಿಕೆಯಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿರುವ ಒಂಬತ್ಕೆರೆ, ರಟ್ಟಹಳ್ಳಿಯಲ್ಲಿ ಗಿಡಮರ ಬೆಳೆಸುವ ಪ್ರಚಾರಾಂದೋಲನ, ಚಾಮುಂಡಿ ಬೆಟ್ಟದಲ್ಲಿ ಮರಗಳನ್ನು ಉಳಿಸಲು ಚಳುವಳಿ, ಚಾಮಲಪುರ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯ ವಿರುದ್ಧ ಪ್ರತಿಭಟನೆ, ಬೆಂಗಳೂರು-ಮೈಸೂರು ಕಾರಿಡಾರ್‌ ಯೋಜನೆಯ ವಿರುದ್ಧ ನಡೆಸಿರುವ ಪ್ರತಿಭಟನೆಗಳು ಇವರ ಸಾಮಾಜಿಕ ಕಳಕಳಿಯ ಹೋರಾಟಗಳಿಗೆ ಕೆಲವು ಉದಾಹರಣೆಗಳು. 
  
 ಪರಿಸರ ಹಕ್ಕು, ಗ್ರಾಹಕ ಹಕ್ಕು, ನಾಗರಿಕ ಹಕ್ಕು, ಇದೀಗ ದೇಶದ್ರೋಹ ಕಾನೂನಿನ ವಿರುದ್ಧ ಹೋರಾಟ ನಡೆಸುತ್ತಿರುವ ಮೇಜರ್‌ ಜನರಲ್‌ ಸುಧೀರ್‌ ಜಿ ಒಂಬತ್ಕೆರೆ ಅವರನ್ನು ಭಾರತದ ಮುಖ್ಯ ನ್ಯಾಯಾಧೀಶರಾದ ಎನ್‌ ವಿ ರಮಣ ಅವರೇ ಶ್ಲಾಘಿಸಿದ್ದಾರೆ. ಮಾತ್ರವಲ್ಲ, ಸೈನಿಕನಾಗಿ ದೇಶದ ಪರವಾಗಿ ಹಲವು ಯುದ್ಧಗಳಲ್ಲಿ ಹೋರಾಟ ಮಾಡಿದ, ದೇಶಕ್ಕಾಗಿ ಜೀವನವನ್ನು ಸಮರ್ಪಿಸಿದ ಅವರ ಅರ್ಜಿಯಲ್ಲಿ ಯಾವುದೇ ದುರುದ್ಧೇಶ ಇರಲು ಸಾಧ್ಯವಿಲ್ಲವೆಂದು ದೇಶದ್ರೋಹದ ಕಾನೂನಿನ ವಿರುದ್ಧ ಒಂಬತ್ಕೆರೆ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ನುಡಿದಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X