ಉಡುಪಿ: ಇ-ಸ್ಯಾಂಡ್ ಆ್ಯಪ್ ಮೂಲಕ ಮರಳು ಲಭ್ಯ
ಉಡುಪಿ : ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವತಿಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಸಿಆರ್ಝಡ್ ಮತ್ತು ನಾನ್ ಸಿಆರ್ಝಡ್ ಪ್ರದೇಶದ ನದಿ ಪಾತ್ರಗಳಲ್ಲಿ ಮರಳು ತೆರವುಗೊಳಿಸುವ ಕಾರ್ಯ ಕೈಗೊಂಡಿರುವ ಹಿನ್ನೆಲೆ, ಉಡುಪಿ ಇ-ಸ್ಯಾಂಡ್ ಆ್ಯಪ್ ಮೂಲಕ ಮರಳನ್ನು ಸಾರ್ವಜನಿಕರಿಗೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಪೂರೈಸಲಾಗುತ್ತಿದೆ.
ಪ್ರಸ್ತುತ ಮರಳು ಸಾಗಾಣಿಕೆ ಕುರಿತು ಸಾರ್ವಜನಿಕರಿಂದ ದೂರುಗಳು ಸ್ವೀಕೃತವಾಗಿರುವ ಕಾರಣ ತಾತ್ಕಾಲಿಕ ಮರಳು ಪರವಾನಿಗೆದಾರರು, ಮರಳು ಗುತ್ತಿಗೆದಾರರು, ವಾಹನ ಮಾಲಕರು ಹಾಗೂ ಚಾಲಕರು ರೇನ್ ಟಿ೪ಯು ಜಿಪಿಎಸ್ ಸಂಸ್ಥೆಯಿಂದ ಯುಸರ್ ಐಡಿ ಮತ್ತು ಪಾಸ್ವರ್ಡ್ ಅನ್ನು ಪಡೆದು, ಇಎಂ ವಿಷನ್ ಆ್ಯಪ್ ಮೂಲಕ ಮರಳು ಸಾಗಾಣಿಕೆ ವಾಹನಗಳ ಚಲನವಲನಗಳನ್ನು ಹಾಗೂ ಸಾರ್ವಜನಿಕರು, ಕಂದಾಯ, ಪೊಲೀಸ್, ಆರ್ಟಿಓ ಹಾಗೂ ಇತರೆ ಇಲಾಖೆಗಳು ಸ್ಯಾಂಡಿ ಉಡುಪಿ ಆ್ಯಪ್ ಮೂಲಕ ವಾಹನಗಳ ಚಾಲಕರು ಮರಳು ಸಾಗಾಣಿಕೆ ಮಾಡುವ ಕುರಿತು ಪರಿಶೀಲಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಹಿರಿಯ ಭೂವಿಜ್ಞಾನಿಯವರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ರಜತಾದ್ರಿ, ಮಣಿಪಾಲ, ಉಡುಪಿ, ದೂರವಾಣಿ ಸಂಖ್ಯೆ: ೦೮೨೦-೨೯೫೦೦೮೮, ೨೫೭೨೩೩೩ ಹಾಗೂ ಆ್ಯಪ್ನ ಮಾಹಿತಿಗಾಗಿ ರೇನ್ ಟಿ೪ಯು ಪ್ರೈ.ಲಿ, ಅಂಬಾಗಿಲು ರಸ್ತೆ, ಪೆರಂಪಳ್ಳಿ, ಉಡುಪಿ, ಮೊಬೈಲ್ ಸಂಖ್ಯೆ: ೮೩೧೦೭೩೮೪೭೬, ೯೬೧೧೭೧೨೩೬೧, ೮೦೫೦೧೨೧೮೮೬ ಅನ್ನು ಸಂಪರ್ಕಿಸಬಹುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಗಳ ಪ್ರಕಟಣೆ ತಿಳಿಸಿದೆ.