ಪ್ರವಾದಿ ವಿರುದ್ಧ ಬಿಜೆಪಿ ವಕ್ತಾರೆಯ ಹೇಳಿಕೆಯನ್ನು ಖಂಡಿಸಿದ ಸೌದಿ ಅರೇಬಿಯಾ ಸರಕಾರ
ರಿಯಾದ್: ಪ್ರವಾದಿ ಮುಹಮ್ಮದ್ ರನ್ನು ಟಿವಿ ಕಾರ್ಯಕ್ರಮವೊಂದರಲ್ಲಿ ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಸೌದಿಅರೇಬಿಯಾ ವಿದೇಶಾಂಗ ಸಚಿವಾಲಯ ಹೇಳಿಕೆಯ ಕುರಿತೂ ಹೇಳಿಕೆಯ ಕುರಿತು ಖಂಡನೆ ವ್ಯಕ್ತಪಡಿಸಿದೆ ವ್ಯಕ್ತಪಡಿಸಿದೆ.
“ಎಲ್ಲಾ ಧಾರ್ಮಿಕ ವ್ಯಕ್ತಿಗಳು ಮತ್ತು ಚಿಹ್ನೆಗಳ ಕುರಿತು ಯಾವುದೇ ಪೂರ್ವಾಗ್ರಹ ಹೇಳಿಕೆಗಳನ್ನು ಶಾಶ್ವತವಾಗಿ ತಿರಸ್ಕರಿಸುವುದನ್ನು ದೇಶವು ದೃಢಪಡಿಸುತ್ತದೆ. ನಂಬಿಕೆಗಳು ಮತ್ತು ಧರ್ಮಗಳಿಗೆ ಗೌರವವನ್ನು ನೀಡುವ ತನ್ನ ನಿಲುವನ್ನು ಸೌದಿ ಅರೇಬಿಯಾ ಪುನರುಚ್ಚರಿಸುತ್ತದೆ" ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ ಎಂದು ಅಲ್ ಜಝೀರಾ ವರದಿ ಮಾಡಿದೆ.
ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿ ಕತರ್, ಕುವೈಟ್ ಹಾಗು ಇರಾನ್ ದೇಶಗಳು ಭಾರತದ ರಾಯಭಾರಿಗಳಿಗೆ ಸಮನ್ಸ್ ನೀಡಿತ್ತು.
Next Story