ಎಕ್ಕಾರರ ಜೀವನ ಯುವಕ ಜನತೆಗೆ ಮಾದರಿ: ಬನ್ನಂಜೆ ಬಾಬು ಅಮೀನ್

ಉಡುಪಿ : ಬದುಕಿನಲ್ಲಿ ವೃತ್ತಿ ಜೀವನವು ಎರಡನೇ ಘಟ್ಟವಾಗಿದ್ದು, ಅದನ್ನು ಸಾರ್ಥಕಗೊಳಿಸಿದವರು ಎಕ್ಕಾರು. ಒಬ್ಬ ಒಳ್ಳೆಯ ಅಧ್ಯಾಪಕ ಮತ್ತು ಅಧಿಕಾರಿ ಹೇಗಿರಬೇಕೆಂಬುದನ್ನು ಅವರು ತೋರಿಸಿದ್ದಾರೆ. ಶ್ರೇಷ್ಠ ಬೋಧಕ ನಾಗಿ, ಸರಕಾರಿ ಅಧಿಕಾರಿಯಾಗಿ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ ಎಂದು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಹೇಳಿದ್ದಾರೆ.
ತೆಂಕನಿಡಿಯೂರು ಸ್ಫೊರ್ಟ್ಸ್ ಕ್ಲಬ್ ಮತ್ತು ಮಿತ್ರ ಮಂಡಳಿಯ ಆಶ್ರಯದಲ್ಲಿ ಉಡುಪಿಯ ಹೊಟೇಲ್ ಕಾರ್ತಿಕ್ ಇಂಟರ್ನ್ಯಾಷನಲ್ನಲ್ಲಿ ರವಿವಾರ ನಡೆದ ಡಾ.ಗಣನಾಥ ಎಕ್ಕಾರುರವರ ಸಾರ್ವಜನಿಕ ಸನ್ಮಾನ ಸಮಾರಂಭ ದಲ್ಲಿ ಅವರು ಮಾತನಾಡುತ್ತಿದ್ದರು.
ತೆಂಕನಿಡಿಯೂರು ಕಾಲೇಜು ಪ್ರಾಂಶುಪಾಲ ಡಾ.ಸುರೇಶ್ ರೈ ಮಾತನಾಡಿ, ಎನ್ನೆಸೆಸ್ ಮೂಲಕ ಕಾಲೇಜಿಗೆ ಮಾತ್ರವಲ್ಲ ರಾಜ್ಯಕ್ಕೆ ಘನತೆಯನ್ನು ತಂದವರು ಡಾ.ಎಕ್ಕಾರ್. ೩೩ ವರ್ಷಗಳ ವೃತ್ತಿ ಜೀವನ ಸಾರ್ಥಕವಾಗಿದೆ ಎಂದರು.
ತುಳು ಸಿರಿ ಚಾವಡಿಯ ಸಂಚಾಲಕ ಈಶ್ವರ ಶೆಟ್ಟಿ ಚಿಟ್ಪಾಡಿ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಹರಿಯಪ್ಪ ಕೋಟ್ಯಾನ್, ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಪ್ರಸಾದ್ ರಾವ್, ಶಂಕರನಾರಾಯಣ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಉದಯಕುಮಾರ್ ಶೆಟ್ಟಿ, ಹಳೆಯಂಗಡಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಶ್ರೀಧರ್, ತೆಂಕನಿಡಿ ಯೂರು ಸ್ಫೋರ್ಟ್ಸ್ ಕ್ಲಬ್ನ ಅಧ್ಯಕ್ಷ ಕೃಷ್ಣಾನಂದ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗಣನಾಥ ಎಕ್ಕಾರು ಹಾಗೂ ಡಾ. ನಿಕೇತನಾ ಅವರನ್ನು ಅಭಿನಂದಿಸಲಾಯಿತು. ಕ್ರೀಡಾ ನಿರ್ದೇಶಕ ಡಾ.ರಾಮಚಂದ್ರ ಪಾಟ್ಕರ್ ಸ್ವಾಗತಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಾಘವ ನಾಯ್ಕ ವಂದಿಸಿದರು.