ತಮ್ಮ ಬಸ್ ಹತ್ತುವ ಎಲ್ಲಾ ಪ್ರಯಾಣಿಕರಿಗೆ ನೀರು ನೀಡಿ ಉಪಚರಿಸುತ್ತಾರೆ ಈ ಕಂಡಕ್ಟರ್!

Photo: Twitter/ @AwanishSharan
ಚಂಡೀಗಢ: ಹರ್ಯಾಣ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್ ಆಗಿರುವ ಸುರೇಂದ್ರ ಶರ್ಮ ಅವರ ವಿಚಾರ ಇಂಟರ್ನೆಟ್ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಅಷ್ಟಕ್ಕೂ ಈ ಸಾಮಾನ್ಯ ಬಸ್ ಕಂಡಕ್ಟರ್ ಏನು ಮಾಡಿದ್ದಾರೆ ಎಂದು ತಿಳಿದಿದೆಯೇ?
ತಾವು ಕೆಲಸ ಮಾಡುವ ಬಸ್ ಅನ್ನುಹತ್ತುವ ಪ್ರತಿ ಪ್ರಯಾಣಿಕನಿಗೂ ಸುರೇಂದ್ರ ಅವರು ಒಂದು ಗ್ಲಾಸ್ ನೀರು ನೀಡಿ ಉಪಚರಿಸುತ್ತಾರೆ. ಕಳೆದ 12 ವರ್ಷಗಳಿಂದ ಅವರು ಈ ಕಾರ್ಯವನ್ನು ಮನಃಪೂರ್ವಕವಾಗಿ ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.
ಈ ವಿಚಾರವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಎಂಬವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ರೋಹ್ಟಕ್ ನಿವಾಸಿಯಾಗಿರುವ ಸುರೇಂದ್ರ ಅವರ ಈ ಕಾರ್ಯವನ್ನು ಟ್ವಿಟರಿಗರು ಶ್ಲಾಘಿಸಿದ್ದಾರೆ.
ಮನುಕುಲಕ್ಕೆ ನಿಜವಾದ ಸೇವೆ ಎಂದು ಒಬ್ಬರು ಬರೆದಿದ್ದರೆ ಇನ್ನೊಬ್ಬರು "ಇವರು ಭಾರತದ ನಿಜವಾದ ಹೀರೋಗಳು'' ಎಂದು ವರ್ಣಿಸಿದ್ದಾರೆ.
ಒಬ್ಬ ಟ್ವಿಟರಿಗರು ತಾವು ಸುರೇಂದ್ರ ಅವರು ಪ್ರಯಾಣಿಕರಿಗೆ ನೀರು ನೀಡುವುದನ್ನು ನೋಡಿದ್ದಾಗಿಯೂ ಬರೆದಿದ್ದಾರೆ.
He is Surendra Sharma.He works as a bus conductor with Haryana Roadways and lives in Rohtak.
— Awanish Sharan (@AwanishSharan) June 5, 2022
As soon as a passenger boards the bus, the first thing he offers is a glass of water.He has been religiously following this custom ever since he joined the service 12 years ago. pic.twitter.com/hqy64WZjqC