ಮುಳುಗಿದ್ದ ಹಡಗಿನ ಅವಶೇಷಗಳ ಬಳಿ ಕೋಟ್ಯಾಂತರ ಮೌಲ್ಯದ ಚಿನ್ನದ ರಾಶಿ ಪತ್ತೆ
ವಾಷಿಂಗ್ಟನ್, ಜೂ.10: 1708ರಲ್ಲಿ ಬ್ರಿಟಿಷರು ಮುಳುಗಿಸಿದ್ದ ಸ್ಪೇನ್‌ನ ಸಾನ್‌ಜೋಸ್ ಗ್ಯಾಲೊನ್ ಹಡಗಿನ ಅವಶೇಷಗಳ ಬಳಿ ಸಮುದ್ರತಳದಲ್ಲಿ 17 ಬಿಲಿಯನ್ ಡಾಲರ್ ಮೌಲ್ಯದ ಚಿನ್ನದ ರಾಶಿ ಪತ್ತೆಯಾಗಿರುವುದಾಗಿ ನ್ಯೂಸ್‌ವೀಕ್ ವರದಿ ಮಾಡಿದೆ.
ದೂರನಿಯಂತ್ರಿಕ ನೌಕೆ ಸ್ಪೇನ್‌ನ ಕರಾವಳಿ ತೀರದ ಸಮುದ್ರದ 3,100 ಅಡಿ ಆಳದಲ್ಲಿ ನಡೆಸಿದ ಸಂಶೋಧನೆಯಲ್ಲಿ ಸೆರೆಹಿಡಿಯಲಾದ ವೀಡಿಯೊ ದೃಶ್ಯದಲ್ಲಿ ಸಮುದ್ರದ ತಳದಲ್ಲಿ 2 ಹಡಗುಗಳ ಅವಶೇಷ ಕಾಣುತ್ತದೆ. ಎರಡೂ ಸುಮಾರು 200 ವರ್ಷಗಳಷ್ಟು ಹಳೆಯ ಹಡಗುಗಳಾಗಿದ್ದು ಇದರ ಬಳಿ ಚಿನ್ನದ ನಾಣ್ಯಗಳು, ಚಿನ್ನದ ಲೋಟಗಳ ರಾಶಿ ಪತ್ತೆಯಾಗಿದೆ. ಸಮುದ್ರ ತಳದಲ್ಲಿ ಫಿರಂಗಿ ಮತ್ತು ಒಂದು ಹಡಗಿನ ಕಮಾನನ್ನೂ ಕಾಣಬಹುದಾಗಿದೆ.
ವಿವಿಧ ರೀತಿಯ ಪಿಂಗಾಣಿ ಮಡಕೆಗಳೂ ರಾಶಿ ಬಿದ್ದಿದ್ದು ಶತಮಾನಗಳೇ ಕಳೆದರೂ ಇನ್ನೂ ಅತ್ಯಂತ ಸುಸ್ಥಿತಿಯಲ್ಲಿ ಇರುವುದು ವೀಡಿಯೊ ಚಿತ್ರಗಳಿಂದ ಸ್ಪಷ್ಟವಾಗಿದೆ ಎಂದು ವರದಿ ಹೇಳಿದೆ.
ನೌಕಾಪಡೆ ಮತ್ತು ಸರಕಾರದ ಪುರಾತತ್ವ ಶಾಸ್ತçಜ್ಞರು ಹಡಗಿನ ಫಲಕಗಳಲ್ಲಿ ಇರುವ ಬರಹಗಳ ಆಧಾರದಲ್ಲಿ ಅದರ ಮೂಲವನ್ನು ಪತ್ತೆಹಚ್ಚಲಿದ್ದಾರೆ. ಇದೀಗ ನೀರಿನಡಿಯ ಚಿನ್ನದ ಸಂಪತ್ತನ್ನು ಹೊರತೆಗೆಯುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನೀರಿನಡಿಯ ಖಜಾನೆಯನ್ನು ಹೊರತೆಗೆದು ಭವಿಷ್ಯದ ಹೊರತೆಗೆಯುವಿಕೆಗೆ ಹಣಕಾಸಿನ ವ್ಯವಸ್ಥೆ ಮಾಡುವ ಯೋಜನೆಯಿದೆ. ಈ ರೀತಿಯಾಗಿ ನಾವು ಸಾನ್‌ಜೋಸ್ ಗ್ಯಾಲೊನ್‌ನ ಆಸ್ತಿಯನ್ನು ಸಂರಕ್ಷಿಸಲಿದ್ದೇವೆ ಎಂದು ಸ್ಪೇನ್ ಅಧ್ಯಕ್ಷ ಇವಾನ್ ಡ್ಯೂಕ್ ಹೇಳಿದ್ದಾರೆ.