ಊಹಾಪೋಹಗಳಿಗೆ ಕಾರಣವಾದ ಬಂಧನದಲ್ಲಿರುವ ದಿಲ್ಲಿ ಸಚಿವ ಸತ್ಯೇಂದ್ರ ಜೈನ್ ಅವರ ಚಿತ್ರ
ದೇಶ ನಿಮ್ಮನ್ನು ಕ್ಷಮಿಸದು ಎಂದು ಪ್ರಧಾನಿ, ಇಡಿಗೆ ಹೇಳಿದ ಆಪ್ ನಾಯಕ

Photo: Twitter/ @SanjayAzadSln
ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಬಂಧನಕ್ಕೀಡಾಗಿ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವ ದಿಲ್ಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರ ಮುಖದಲ್ಲಿ ಗಾಯ ಹಾಗೂ ರಕ್ತದ ಕಲೆಗಳಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಚಿವರನ್ನು ಆಸ್ಪತ್ರೆಗೆ ವಾಹನದಲ್ಲಿ ಕರೆದೊಯ್ಯುತ್ತಿರುವಾಗ ಈ ಚಿತ್ರ ಸೆರೆಹಿಡಿಯಲಾಗಿದೆ ಎನ್ನಲಾಗಿದೆ.
ಸಚಿವರ ವಕೀಲರ ಪ್ರಕಾರ ಕೋವಿಡ್ ನಂತರದ ಸಮಸ್ಯೆಯಾದ ಸ್ಲೀಪ್ ಏಪ್ನಿಯಾದಿಂದ ಆವರು ಬಳಲುತ್ತಿದ್ದಾರೆ, ಅಸೌಖ್ಯವಿರುವುದರಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದ್ದಾರೆ. "ಅವರು ಕೋರ್ಟಿನಿಂದ ಹೊರಬರುವಾಗ ಅವರಿಗೆ ಅನಾರೋಗ್ಯ ಕಾಡಿತ್ತು,''ಎಂದು ಅವರು ಹೇಳಿದ್ದಾರೆ.
ಆದರೆ ಅವರ ಮುಖ ತುಟಿಯ ಸಮೀಪ ರಕ್ತದ ಕಲೆಗಳನ್ನು ಗಮನಿಸಿದ ಸಾಮಾಜಿಕ ಜಾಲತಾಣಿಗರು ಅವರಿಗೆ ಗಾಯಗಳಾಗಿವೆ ಎಂದು ಶಂಕಿಸಿದ್ದಾರೆ.
ಈ ಚಿತ್ರವನ್ನು ಶೇರ್ ಮಾಡಿದ ಹಿರಿಯ ಆಪ್ ನಾಯಕ ಸಂಜಯ್ ಸಿಂಗ್ ''ಇದು ಪ್ರಧಾನಿ ನರೇಂದ್ರ ಮೋದಿ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಕಪ್ಪು ಚುಕ್ಕೆ. ದೇಶ ನಿಮ್ಮನ್ನು ಯಾವತ್ತೂ ಕ್ಷಮಿಸುವುದಿಲ್ಲ,''ಎಂದು ಬರೆದಿದ್ದಾರೆ.
"ದಿಲ್ಲಿಗೆ ಮೊಹಲ್ಲಾ ಕ್ಲಿನಿಕ್ಗಳನ್ನು ನೀಡಿದವರ ಪರಿಸ್ಥಿತಿ'' ಎಂದು ಬರೆದು ಸತ್ಯೇಂದ್ರ ಜೈನ್ ಅವರ ಫೋಟೋ ಪೋಸ್ಟ್ ಮಾಡಿದ್ದ ಪತ್ರಕರ್ತರೊಬ್ಬರ ಪೋಸ್ಟ್ ಅನ್ನು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈ ಹಿಂದೆ ರಿಟ್ವೀಟ್ ಮಾಡಿದ್ದರು.
ಆದರೆ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಲು ಕೇಜ್ರಿವಾಲ್ ನಿರಾಕರಿಸಿದ್ದರು. ತಮಗೆ ಅವರ ಜೊತೆಗೆ ಈಗ ನೇರ ಸಂಪರ್ಕವಿಲ್ಲ ಹಾಗೂ ಅವರು ಇಡಿ ಕಸ್ಟಡಿಯಲ್ಲಿರುವುದರಿಂದ ಏನೂ ಹೇಳಲು ಸಾಧ್ಯವಿಲ್ಲ, ಎಂದಿದ್ದರು. "ಪ್ರತಿಕ್ರಿಯೆ ನೀಡುವ ಸ್ಥಿತಿಯಲ್ಲಿ ನಾನಿಲ್ಲ. ಅವರನ್ನು ನಿನ್ನೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರು ಸುಧಾರಿಸಿಕೊಂಡ ನಂತರ ವಾಪಸ್ ಕರೆದೊಯ್ಯಲಾಯಿತು,'' ಎಂದು ಅವರು ಹೇಳಿದ್ದರು.
ये वो शख़्स है जिसने देश को मोहल्ला क्लिनिक का मॉडल दिया 5 Flyover के निर्माण में दिल्ली की जनता का 300 करोड़ रु बचाया।@SatyendarJain की ये तस्वीर मोदी और उनकी मैना (ED) पर काला दाग है।
— Sanjay Singh AAP (@SanjayAzadSln) June 10, 2022
ये देश तुम लोगों को कभी माफ़ नही करेगा। pic.twitter.com/ejO4KcLLFb