ಶಾರದಾ ನಿಕೇತನದ ವಿದ್ಯಾರ್ಥಿ ಡೆತ್ ನೋಟ್ ನಲ್ಲಿ ಹೇಳಿದ್ದೇನು?
ವಿವರಿಸಿದ ಮಂಗಳೂರು ಕಮಿಷನರ್ ಶಶಿಕುಮಾರ್

ಕಮಿಷನರ್ ಶಶಿಕುಮಾರ್
ಮಂಗಳೂರು: ತಲಪಾಡಿಯ ಶಾರದಾ ವಿದ್ಯಾನಿಕೇತನ ಹಾಸ್ಟೆಲ್ನಲ್ಲಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದ ರಮೇಶ್ ಎಂಬವರ 14 ವರ್ಷದ ಪೂರ್ವಜ್ ಎಂಬ ವಿದ್ಯಾರ್ಥಿಯ ಅಸಹಜ ಸಾವು ಸಂಭವಿಸಿದ್ದು, ಆತ ತನ್ನ ಡೆತ್ನೋಟಿನಲ್ಲಿ ತಾಯಿಗೆ ಕರೆ ಮಾಡಲು ಸಾಧ್ಯ ಆಗಿಲ್ಲ. ಹಾಗಾಗಿ ತಾನು ಸಾಯುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಕುಟುಂಬ ಸದಸ್ಯರು ಈ ಸಾವಿನ ಬಗ್ಗೆ ತನಿಖೆ ಮಾಡುವಂತೆ ದೂರು ನೀಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ವಿದ್ಯಾರ್ಥಿಯ ಸಾವಿನ ಬಗ್ಗೆ ಅನುಮಾನಸ್ಪದವಾಗಿ ಅಸಹಜ ಸಾವು ಎಂಬ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ಮಾಡಲಾಗುವುದು. ಮೊಬೈಲ್ನಲ್ಲಿ ಮಾತನಾಡಲು ಅವಕಾಶ ನೀಡುತ್ತಿರಲಿಲ್ಲ ಎಂದು ಮೃತ ಬಾಲಕನ ಪೋಷಕರು ಹೇಳಿದ್ದಾರೆ. ಶಾಲೆಯಲ್ಲಿ ಯಾವ ನಿಯಮ ಪಾಲಿಸಲಾಗುತ್ತಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು. ನಗರದಲ್ಲಿ ಸಾಕಷ್ಟು ವಸತಿಯುತ ಶಿಕ್ಷಣ ಸಂಸ್ಥೆಗಳಿವೆ. ಅಲ್ಲಿನ ನಿಯಮಗಳೇನು, ಈ ಸಂಸ್ಥೆಯ ನಿಯಮಗಳೇನು ಎಂಬ ಬಗ್ಗೆ ತಿಳಿದುಕೊಳ್ಳಲಾಗುವುದು. ಎಸಿಪಿ ಮತ್ತು ಇನ್ಸ್ಪೆಕ್ಟರ್ ಸಂಸ್ಥೆಗೆ ಭೇಟಿ ನೀಡಿ ಪೋಸ್ಟ್ ಮಾರ್ಟಮ್ ಬಳಿಕ ಪಾರ್ಥಿವ ಶರೀರವನ್ನು ಪೋಷಕರಿಗೆ ಒಪ್ಪಿಸಿದ್ದಾರೆ ಎಂದು ಅವರು ಹೇಳಿದರು.