ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಸುರತ್ಕಲ್ ರೇಂಜ್ ಅಧ್ಯಕ್ಷರಾಗಿ ಅಬ್ದುಲ್ಲಾ ದಾರಿಮಿ ಮುಲ್ಕಿ ಆಯ್ಕೆ

ಅಬ್ದುಲ್ಲಾ ದಾರಿಮಿ, ಆಸಿಫ್ ಯಮಾನಿ
ಸುರತ್ಕಲ್, ಜೂ.19: ಸಮಸ್ತ ಕೇರಳ ಜಂ ಇಯ್ಯತುಲ್ ಮುಅಲ್ಲಿಮೀನ್ ಸುರತ್ಕಲ್ ರೇಂಜ್ ಅಧ್ಯಕ್ಷರಾಗಿ ಅಬ್ದುಲ್ಲಾ ದಾರಿಮಿ ಮುಲ್ಕಿ ಆಯ್ಕೆಯಾಗಿದ್ದಾರೆ,
ಇತ್ತೀಚೆಗೆ ಚೊಕ್ಕಬೆಟ್ಟುವಿನ ಅಲ್ ಮದ್ರಸತುಲ್ ಅಝೀಝಿಯ್ಯ ಸಭಾಂಗಣದಲ್ಲಿ ನಡೆದ ರೇಂಜ್ ನ ವಾರ್ಷಿಕ ಮಹಾ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಅಬೂಬಕರ್ ಮದನಿ, ನಾಸಿರ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಆಸಿಫ್ ಯಮಾನಿ, ಕಾರ್ಯದರ್ಶಿಗಳಾಗಿ ಮುಸ್ತಫ ಅಝ್ಹರಿ, ಇಮ್ರಾನ್ ದಾರಿಮಿ, ಕೋಶಾಧಿಕಾರಿಯಾಗಿ ಇಬ್ರಾಹೀಂ ಬೊಳ್ಳೂರು, ಪರೀಕ್ಷಾ ಬೋರ್ಡ್ ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಮದನಿ, ಐ.ಟಿ. ಕೊ ಆರ್ಡಿನೇಟರ್ ಆಗಿ ಜಲೀಲ್ ಫೈಝಿ, ಎಸ್ಕೆಎಸ್ಬಿವಿ ಅಧ್ಯಕ್ಷರಾಗಿ ದಾವೂದ್ ದಾರಿಮಿ ಆಯ್ಕೆಯಾಗಿದ್ದಾರೆ.
ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಮುಫತ್ತಿಶ್ ಎಂ.ಅಬ್ದುಲ್ಲಾ ಕುಂಞಿ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಸ್.ವೈ.ಎಸ್. ದ.ಕ. ಜಿಲ್ಲಾಧ್ಯಕ್ಷ, ಸ್ಥಳೀಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಉದ್ಘಾಟಿಸಿದರು. ಮುದರ್ರಿಬ್ ರಿಯಾಝ್ ರಹ್ಮಾನಿ ವಿಶೇಷ ತರಗತಿ ನಡೆಸಿದರು,
ಸಭೆಯಲ್ಲಿ ಸುರತ್ಕಲ್ ರೆಂಜ್ ಮ್ಯಾನೇಜ್ಮೆಂಟ್ ಅಧ್ಯಕ್ಷ ಇಲ್ಯಾಸ್ ಸೂರಿಂಜೆ, ಪ್ರಧಾನ ಕಾರ್ಯದರ್ಶಿ ಹನೀಫ್ ಇಡ್ಯಾ, ಮುಹಮ್ಮದ್ ಇಂದಿರಾ ನಗರ, ಬಶೀರ್ ಚೊಕ್ಕಬೆಟ್ಟು, ಇಮ್ತಿಯಾಝ್ ಇಡ್ಯಾ, ರಝಾಕ್ ಅಝ್ಹರಿ ಸಿರಾಜ್ ಫೈಝಿ, ದಾವೂದ್ ಹನೀಫಿ ಉಪಸ್ಥಿತರಿದ್ದರು.
ಸಿರಾಜ್ ಫೈಝಿ ಸ್ವಾಗತಿಸಿದರು. ಆಸಿಫ್ ಯಮಾನಿ ವಂದಿಸಿದರು.