ಯಕ್ಷಗಾನ ತರಬೇತಿ ನೀಡಲು ಕೆ.ಜೆ.ಗಣೇಶ್ ಅಮೆರಿಕಾಕ್ಕೆ

ಉಡುಪಿ: ಯಕ್ಷಗಾನ ತರಬೇತಿ ನೀಡುವ ನಿಟ್ಟಿನಲ್ಲಿ ಭಾಗವತ ಕೆ.ಜೆ.ಗಣೇಶ್ ಕಿದಿಯೂರು ಜೂ.೨೩ರಂದು ಅಮೆರಿಕಾಕ್ಕೆ ತೆರಳಲಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಜೆ.ಗಣೇಶ್, ಜು.೨ ಮತ್ತು ೩ರಂದು ಅಮೆರಿಕದ ಕ್ಯಾಲಿಫೋರ್ನಿಯದ ಡೌಘರ್ಟಿ ವ್ಯಾಲಿ ಪರ್ಫೋಮಿಂಗ್ ಆಟ್ಸ್ ಸೆಂಟರ್ನಲ್ಲಿ ನಡೆಯಲಿರುವ ಹವ್ಯಕ ಅಸೋಸಿ ಯೇಶನ್ ಆಫ್ ಅಮೆರಿಕ ಸಂಸ್ಥೆಯ ೧೯ನೆ ಸಮ್ಮೇಳನದ ಸಾಂಸ್ಕೃತಿಕ ಕಾರ್ಯ ಕ್ರಮದಲ್ಲಿ ಅಲ್ಲಿಯ ಯಕ್ಷ ಬಳಗದ ಸದಸ್ಯರಿಗೆ ಯಕ್ಷ ನೃತ್ಯ ತರಬೇತಿ ನೀಡ ಲಾಗುವುದು ಎಂದರು.
ದಕ್ಷಯಜ್ಞ ಮತ್ತು ಕೃಷ್ಣಾರ್ಜುನ ಪ್ರಸಂಗಗಳನ್ನು ನಿರ್ದೇಶಿಸಿ ಪ್ರದರ್ಶಿಸಲಾಗು ವುದು. ಇದೇ ಉದ್ದೇಶದಿಂದ ಈ ಹಿಂದೆ ಆರು ಬಾರಿ ಅಮೆರಿಕಾಕ್ಕೆ ತೆರಳಿ ತರಬೇತಿ ನೀಡಿದ್ದೇನೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ರತ್ನಾಕರ ಆಚಾರ್ಯ, ಕಾರ್ಯದರ್ಶಿ ವಿಶ್ವನಾಥ್ ಆಚಾರ್ಯ, ಉಪಾಧ್ಯಕ್ಷ ವೆಂಕಟೇಶ್ ಆಚಾರ್ಯ, ಕುತ್ಯಾರು ಆನೆಗುಂದಿ ಮಠದ ವಿಶ್ವಸ್ಥ ನಾಗರಾಜ ಆಚಾರ್ಯ ಹಾಜರಿದ್ದರು.