ಹಿಮಾಚಲ ಪ್ರದೇಶ: ಕಣಿವೆಗೆ ಉರುಳಿದ ಬಸ್: ಶಾಲಾ ವಿದ್ಯಾರ್ಥಿಗಳ ಸಹಿತ 16 ಮಂದಿ ಸಾವು

Photo: Twitter/@ANI
ಕುಲ್ಲು, ಜು. 4: ಹಿಮಾಚಲಪ್ರದೇಶದ ಕುಲ್ಲುವಿನ ಸೈಂಜ್ ಕಣಿವೆಯಲ್ಲಿ ಖಾಸಗಿ ಬಸ್ಸೊಂದು ಸೋಮವಾರ ಬೆಳಗ್ಗೆ ಕೊರಕಲಿಗೆ ಉರುಳಿದ ಪರಿಣಾಮ ಶಾಲಾ ಮಕ್ಕಳು ಸೇರಿದಂತೆ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ.
ಸೈಂಜ್ನತ್ತ ತೆರಳುತ್ತಿದ್ದ ಬಸ್ಸು ಜಂಗ್ಲಾ ಗ್ರಾಮದ ಸಮೀಪ ಕೊರಕಲಿಗೆ ಉರುಳಿತು ಎಂದು ಕುಲ್ಲು ಉಪ ಆಯುಕ್ತ ಅಶುತೋಷ್ ಗರ್ಗ್ ಅವರು ತಿಳಿಸಿದ್ದಾರೆ.
ಈ ದುರ್ಘಟನೆ ಬೆಳಗ್ಗೆ 8 ಗಂಟೆಗೆ ಸಂಭವಿಸಿದೆ. ಬಸ್ನಲ್ಲಿ ಸುಮಾರು 45 ಮಂದಿ ಪ್ರಯಾಣಿಕರಿದ್ದರು. ಅವರಲ್ಲಿ ಹಲವರು ಗಾಯಗೊಂಡಿದ್ದಾರೆ.
ದುರಂತದಲ್ಲಿ ಮೃತಪಟ್ಟವರಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ರೂಪಾಯಿ ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ.
Next Story