ಬ್ಯಾರೀಸ್ ವೆಲ್ಫೇರ್ ಫೋರಮ್ ಅಬುಧಾಬಿ ವತಿಯಿಂದ ಗೌರವ ಡಾಕ್ಟರೇಟ್ ಪುರಸ್ಕೃತ ಯೆನೆಪೊಯ ಅಬ್ದುಲ್ಲ ಕುಂಞಿಗೆ ಸನ್ಮಾನ

ಮಂಗಳೂರು : ಬ್ಯಾರೀಸ್ ವೆಲ್ಫೇರ್ ಫೋರಮ್ ಅಬುಧಾಬಿ ವತಿಯಿಂದ ಗುಲ್ಬರ್ಗ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಯೆನೆಪೊಯ ಪರಿಗಣಿಸಲ್ಪಟ್ಟ ವಿವಿಯ ಕುಲಪತಿ ಡಾ. ವೈ.ಅಬ್ದುಲ್ಲ ಕುಂಞಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ನಗರದ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಡಾ ಅಬ್ದುಲ್ಲ ಕುಂಞಿ ಅವರಿಗೆ ಶಾಲು ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಬಿಡಬ್ಲ್ಯೂಎಫ್ ಅಧ್ಯಕ್ಷ ಮೊಹಮ್ಮದ್ ಅಲಿ ಉಚ್ಚಿಲ್, ಹನೀಫ್ ಉಳ್ಳಾಲ್ ಮತ್ತು ಮೊಹಮ್ಮದ್ ಸಿದ್ದಿಕ್ ಸನ್ಮಾನಿಸಿದರು.
ಮೀಫ್ ನ ಗೌರವಾಧ್ಯಕ್ಷ ಉಮರ್ ಟೀಕೆ, ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಸಯ್ಯದ್ ಮೊಹಮ್ಮದ್ ಬ್ಯಾರಿ, ಎಸ್ ಎಂ ರಶೀದ್ ಹಾಜಿ, ಮುಮ್ತಾಜ್ ಅಲಿ, ಅಬ್ಬೂಬಕ್ಕರ್ ಸಿದ್ದಿಕ್, ಯು.ಟಿ. ಇಫ್ತಿಕಾರ್ ಅಲಿ, ಬದ್ರುದ್ದೀನ್ ಪಣಂಬೂರ್, ಮೂಸಬ್ಬ ಪಿ ಬ್ಯಾರಿ, ನಾಸಿರ್ ಲಕ್ಕಿ ಸ್ಟಾರ್, ಶಾಬಿ ಖಾಜಿ, ನಿಸಾರ್ ಮೊಹಮ್ಮದ್, ಬಿ.ಎ ನಝೀರ್, ರಾಜೇಂದ್ರ ಭಟ್, ಆಸೀಫ್ ಹೋಂ ಪ್ಲಸ್, ರಿಯಾಝ್ ಅಹ್ಮದ್, ಮುಸ್ತಫಾ ಸುಳ್ಯ, ಇಬ್ರಾಹಿಂ ಗಡಿಯಾರ್, ಅಬ್ದುಲ್ ರಹ್ಮಾನ್ ತೊಕ್ಕೊಟ್ಟು ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.
ಮೊಹಮ್ಮದ್ ಅಲಿ ಕಮ್ಮರಡಿ ಕಾರ್ಯಕ್ರಮ ನಿರ್ವಹಿಸಿದರು.