ಬಂಟ್ವಾಳ: ನೇತ್ರಾವತಿಯಲ್ಲಿ ಇಳಿಕೆಯಾದ ನೀರು

ಬಂಟ್ವಾಳ, ಜು.11: ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದ ರವಿವಾರ ಅಪಾಯದ ಮಟ್ಟವನ್ನು ಮೀರಿ ಹರಿದ ನೇತ್ರಾವತಿ ನದಿಯಲ್ಲಿ ಸೋಮವಾರ ಬೆಳಗ್ಗೆ ನೀರಿನ ಮಟ್ಟ ಇಳಿಕೆಯಾಗಿದೆ.
ರವಿವಾರ ಬೆಳಗ್ಗೆ ನೇತ್ರಾವತಿ ನದಿಯಲ್ಲಿ ಅಪಾಯದ ಮಟ್ಟವಾದ 8.5 ಮೀಟರ್ ಅನ್ನು ಮೀರಿ 8.7 ಮೀಟರ್ ವರೆಗೆ ತಲುಪಿದ ನೀರು ನದಿ ಪಾತ್ರದ ಜನರಲ್ಲಿ ಆತಂಕ ಮೂಡಿಸಿತ್ತು. ಸಂಜೆಯ ಬಳಿಕ ಸ್ವಲ್ಪ ಸ್ವಲ್ಪ ಇಳಿಕೆಯಾಗ ತೊಡಗಿದ ನೀರು ಸೋಮವಾರ ಬೆಳಗ್ಗೆ 7.3 ಮೀಟರ್ ಗೆ ಇಳಿಕೆಯಾಗಿದೆ.
ರವಿವಾರ ಜಲಾವೃತವಾಗಿದ್ದ ತಗ್ಗು ಪ್ರದೇಶಗಳಲ್ಲಿ ಕೂಡಾ ನೀರು ಇಳಿಕೆಯಾಗಿದೆ. ಘಟ್ಟ ಪ್ರದೇಶದಲ್ಲಿ ಮತ್ತೆ ವ್ಯಾಪಕ ಮಳೆಯಾದರೆ ನೇತ್ರಾವತಿ ನದಿಯಲ್ಲಿ ಮತ್ತೆ ನೀರು ಏರಿಕೆಯಾಗಲಿದೆ.
Next Story