ಸರಕಾರಿ ಒತ್ತುವರಿ ಭೂಮಿ ತೆರವುಗೊಳಿಸಲು ಆಗ್ರಹಿಸಿ ದಸಂಸ ಮನವಿ
ಕುಂದಾಪುರ: ಖಾಸಗಿ ಭೂ ಮಾಲಿಕರು ಒತ್ತುವರಿ ಮಾಡಿಕೊಂಡಿ ರುವ ಸರಕಾರಿ ಅನಾಧೀನ ಭೂಮಿಯನ್ನು ತೆರವುಗೊಳಿಸಿ ಭೂರಹಿತ ಬಡ ಕುಟುಂಬಗಳಿಗೆ ನಿವೇಶನ ನೀಡಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಕುಂದಾಪುರ ತಾಲೂಕು ಸಮಿತಿ ಕುಂದಾಪುರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಕುಂದಾಪುರ ತಾಲೂಕಿನಾದ್ಯಂತ ಸರಕಾರಿ ಭೂಮಿಗಳನ್ನು ಖಾಸಗಿ ಭೂ ಮಾಲಿಕರು ಒತ್ತುವರಿ ಮಾಡಿಕೊಂಡಿ ರುವ ವಿಚಾರ ಕಂದಾಯ ಇಲಾಖೆಯ ಗಮನಕ್ಕೆ ತಂದಿದ್ದರು ಈವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಇಲಾಖೆಯ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ಕೆದೂರು, ಕುಂಭಾಶಿ, ವಕ್ವಾಡಿ, ಹಳ್ಳಿಹೊಳೆ, ಮೊಳಹಳ್ಳಿ, ಶಂಕರನಾರಾಯಣ, ಅಮಾಸೆಬೈಲು, ಕಾಳಾವರ, ಗೋಪಾಡಿ ಗ್ರಾಮಗಳಲ್ಲಿ ಸರಕಾರಿ ಭೂಮಿಗಳನ್ನು ಮನ ಬಂದಂತೆ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸಮಿತಿ ದೂರಿದೆ.
ವಕ್ವಾಡಿ ಗ್ರಾಮದಲ್ಲಿ ಒತ್ತುವರಿ ಮಾಡಿಕೊಂಡ ೭೬ ಎಕ್ರೆಗೂ ಹೆಚ್ಚು ಸರಕಾರಿ ಭೂಮಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು, ಖಾಸಗಿ ದೂರವಾಣಿ ಟವರ್ ನಿರ್ಮಿ ಸಲು ಅವಕಾಶ ಕೊಟ್ಟು ಬಾಡಿಗೆ ರೂಪದಲ್ಲಿ ಹಣವನ್ನು ಪಡೆಯುತಿದ್ದಾರೆ. ಈ ಕೂಡಲೇ ಪಾಗಾರ ಮತ್ತು ದೂರವಾಣಿ ಟವರನ್ನು ತೆರವು ಗೊಳಿಸಿ, ಭೂ ರಹಿತ ದಲಿತರ ಮತ್ತು ದಲಿತೇತರ ಎಲ್ಲಾ ಬಡ ವರ್ಗದ ಜನರಿಗೆ ನಿವೇಶನ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇಲ್ಲದಿದ್ದರೆ ನಮ್ಮ ಭೂಮಿ ನಮ್ಮ ಹಕ್ಕು ಹೋರಾಟವನ್ನು ತಾಲೂಕಿನ ಎಲ್ಲಾ ವರ್ಗದ ಭೂ ರಹಿತರನ್ನು ಒಟ್ಟು ಗೂಡಿಸಿ ಕಂದಾಯ ಇಲಾಖೆಯ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗು ವುದೆಂದು ಸಂಘಟನೆಯ ತಾಲೂಕು ಸಂಚಾಲಕ ಕೆ.ಸಿ.ರಾಜು ಬೆಟ್ಟಿನಮನೆ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.