ಭಾರೀ ಗಾಳಿ ಮಳೆ: ಉಡುಪಿಯಲ್ಲಿ 23 ಮನೆಗಳಿಗೆ ಹಾನಿ, 9.30 ಲಕ್ಷ ರೂ. ನಷ್ಟ

ಫೈಲ್ ಫೋಟೊ
ಉಡುಪಿ, ಜು.೧೩: ಉಡುಪಿ ಜಿಲ್ಲೆಯಾದ್ಯಂತ ಸುರಿದ ಭಾರೀ ಗಾಳಿ ಮಳೆ ಯಿಂದಾಗಿ ಜು.೧೨ರಂದು ಒಟ್ಟು ೨೩ ಮನೆಗಳಿಗೆ ಹಾನಿಯಾಗಿ, ಸುಮಾರು ೯.೩೦ಲಕ್ಷ ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಕಾರ್ಕಳ ತಾಲೂಕಿನ ನಿಟ್ಟೆ, ಯರ್ಲಪಾಡಿ, ಕಡ್ತಲ, ಎಳ್ಳಾರೆ, ಇನ್ನಾದಲ್ಲಿ ಒಟ್ಟು ಆರು ಮನೆಗಳಿಗೆ ಹಾನಿಯಾಗಿ ಒಟ್ಟು ೨.೯೫ಲಕ್ಷ ರೂ., ಬ್ರಹ್ಮಾವರ ತಾಲೂಕಿನ ಮಣೂರು, ಬನ್ನಾಡಿ, ಪಾಂಡೇಶ್ವರ, ಬನ್ನಾಡಿಯಲ್ಲಿ ಒಟ್ಟು ನಾಲ್ಕು ಮನೆಗಳಿಗೆ ಹಾನಿ ಉಂಟಾಗಿದ್ದು, ಒಟ್ಟು ೧.೫೫ಲಕ್ಷ ರೂ. ನಷ್ಟವಾಗಿದೆ.
ಕುಂದಾಪುರ ತಾಲೂಕಿನ ಕಮಲಶಿಲೆ, ಕಂದಾವರ, ದೇವಲ್ಕುಂದ, ನೂಜಾಡಿ, ಕರ್ಕುಂಜೆ, ಅಂಪಾರು, ವಕ್ವಾಡಿ, ಆನಗಳ್ಳಿ, ಕೋಟೇಶ್ವರಗಳಲ್ಲಿ ಒಟ್ಟು ೯ ಮನೆಗಳಿಗೆ ಹಾನಿಯಾಗಿ ಒಟ್ಟು ೩.೫ಲಕ್ಷ ರೂ., ಬೈಂದೂರು ತಾಲೂಕಿನ ಮುದೂರಿನಲ್ಲಿ ಒಂದು ಮನೆಗೆ ಹಾನಿಯಾಗಿ ೫೦,೦೦೦ರೂ., ಕಾಪು ತಾಲೂಕಿನ ಪಲಿಮಾರು ಹಾಗೂ ತೆಂಕ ಎರ್ಮಾಳಿನಲ್ಲಿ ಒಟ್ಟು ಮೂರು ಮನೆಗಳಿಗೆ ಹಾನಿಯಾಗಿ ಒಟ್ಟು ೮೦ಸಾವಿರ ರೂ. ನಷ್ಟ ಉಂಟಾಗಿದೆ.
ಕಳೆದ ೨೪ ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ೬೪.೦ ಮಿ.ಮೀ. ಮಳೆ ಯಾಗಿದ್ದು, ಉಡುಪಿ-೩೧.೦ಮಿ.ಮೀ., ಬ್ರಹ್ಮಾವರ- ೩೮.೬ಮಿ.ಮೀ., ಕಾಪು -೨೪.೮ಮಿ.ಮೀ., ಕುಂದಾಪುರ- ೭೯.೪ಮಿ.ಮೀ., ಬೈಂದೂರು- ೮೮.೩ ಮಿ.ಮೀ., ಕಾರ್ಕಳ- ೫೦.೪ಮಿ.ಮೀ., ಹೆಬ್ರಿ- ೮೯.೭ಮಿ.ಮೀ ಮಳೆಯಾಗಿ ರುವ ಬಗ್ಗೆ ವರದಿಯಾಗಿದೆ.