ಉಡುಪಿ; ಕುಮಾರ್ ಕೊಲೆ ಪ್ರಕರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ

ಉಡುಪಿ : ಇಂದ್ರಾಳಿ ರೈಲ್ವೆ ನಿಲ್ದಾಣದ ಸಮೀಪ ನಡೆದ ತಮಿಳುನಾಡು ಮೂಲದ ಕುಮಾರ್ ಕೊಲೆಯ ಪ್ರಕರಣದ ಇಬ್ಬರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿಗಳಾದ ತಮಿಳುನಾಡು ಮೂಲದ ನವೀನ್ ಮತ್ತು ವಿಘ್ನೇಶ್ ಅಲಿಯಾಸ್ ಕುಟ್ಟಿ ಕ್ಷುಲಕ ಕಾರಣಕ್ಕೆ ಕುಮಾರ್ ಅವರನ್ನು ಜು.21ರಂದು ಮರದ ಸೊಂಟೆಯಿಂದ ಹೊಡೆದು ಕೊಲೆಗೈದಿದ್ದರು. ಆರೋಪಿಗಳನ್ನು ರೈಲ್ವೇ ಪೊಲೀಸರು ಮತ್ತು ಸಾರ್ವಜನಿಕರು ಹಿಡಿದು ಮಣಿಪಾಲ ಪೊಲೀಸರಿಗೆ ಒಪ್ಪಿಸಿದ್ದರು.
ಆರೋಪಿ ವಿಘ್ನೇಶ್ ಅಲಿಯಾಸ್ ಕುಟ್ಟಿ ಮೇಲೆ ತಂಜಾವೂರಿನಲ್ಲಿ ಐದು ವರ್ಷದ ಹಿಂದೆ ಹಲ್ಲೆ ಪ್ರಕರಣವೊಂದು ದಾಖಲಾಗಿತ್ತು. ಆ ಪ್ರಕರಣದಲ್ಲಿ ಆತ ಜೈಲು ಶಿಕ್ಷೆ ಅನುಭವಿಸಿದ್ದ ಎಂದು ತಿಳಿದುಬಂದಿದೆ.
Next Story