ಪುತ್ತಿಗೆ ಮಠದಲ್ಲಿ 7 ಲಕ್ಷ ರೂ. ಮೌಲ್ಯದ ಚಿನ್ನದ ಗಿಂಡಿ ಕಳವು: ಪ್ರಕರಣ ದಾಖಲು

ಉಡುಪಿ : ಉಡುಪಿಯ ಪುತ್ತಿಗೆ ಮಠದಲ್ಲಿ ಏಳು ಲಕ್ಷ ರೂ. ಮೌಲ್ಯದ ಚಿನ್ನದ ಗಿಂಡಿ ಕಳವಾಗಿರುವ ಬಗ್ಗೆ ವರದಿಯಾಗಿದೆ.
ಜು.26ರಂದು ಬೆಳಗ್ಗೆ ಮಠದಲ್ಲಿ ಪೂಜೆಯ ಸಂದರ್ಭದಲ್ಲಿ 6 ಜನ ಮಠದ ವಿದ್ಯಾರ್ಥಿಗಳು ಮತ್ತು ಪುರೋಹಿತ ಲಕ್ಷ್ಮಿ ಪ್ರಸಾದ್ ಬಂದು ಹೋಗಿದ್ದು, ಪೂಜೆಯ ನಂತರ ಪೂಜಾ ಸಾಮಗ್ರಿಗಳನ್ನು ತೆಗೆದು ಇಡುವಾಗ146 ಗ್ರಾಂ ತೂಕದ ಚಿನ್ನದ ಗಿಂಡಿ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
ಈ ಚಿನ್ನದ ಗಿಂಡಿಯನ್ನು ಪುರೋಹಿತ ಲಕ್ಷ್ಮಿ ಪ್ರಸಾದ್ ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಅನುಮಾನ ಇದ್ದು, ಕಳವಾದ ಸೊತ್ತಿನ ಮೌಲ್ಯ ಸುಮಾರು 7 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದು ಮಠದ ವ್ಯವಸ್ಥಾಪಕ ವಿಷ್ಣುಮೂರ್ತಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story