ಬ್ಯಾರೀಸ್ ವಿದ್ಯಾಸಂಸ್ಥೆ ವತಿಯಿಂದ 11ನೆ ಹಂತದ ʼಸ್ವಚ್ಛ ಕಡಲ ತೀರ-ಹಸಿರು ಕೋಡಿʼ ಅಭಿಯಾನ

ಕುಂದಾಪುರ, ಜು. 31: ಕೋಡಿ ಬ್ಯಾರೀಸ್ ವಿದ್ಯಾಸಂಸ್ಥೆಗಳು ನಡೆಸುತ್ತಿರುವ ʼಸ್ವಚ್ಛ ಕಡಲ ತೀರ-ಹಸಿರು ಕೋಡಿʼ ಅಭಿಯಾನದ 11ನೇ ಹಂತದ ಕಾರ್ಯಕ್ರಮ ರವಿವಾರ ಯಶಸ್ವಿಯಾಗಿ ನೆರವೇರಿತು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ವರ್ಗದವರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ವಿದ್ಯಾರ್ಥಿ ಪೋಷಕರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಮತ್ತು ಪರಿಸರ ಪ್ರಿಯರು ಇದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಈ ಸಂದರ್ಭ ಕೋಡಿಯ ಡೆಲ್ಟಾ ಪಾಯಿಂಟ್ನಿಂದ ಹಳೆಅಳಿವೆ ಕಿನಾರ ತುದಿಯವರೆಗಿನ ಸಮುದ್ರ ಕಿನಾರೆಯನ್ನು ಸ್ವಚ್ಛಗೊಳಿಸಲಾಯಿತು.
ಪರಿಸರ ಸಂರಕ್ಷಣೆ ಎಂಬ ಕಾಯಕದಲ್ಲಿ ಸಹಕರಿಸುತ್ತಿರುವ ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿಗಳು ಮತ್ತು ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಮತ್ತು ಎಲ್ಲಾ ಸಿಬ್ಬಂದಿ ವರ್ಗದವರಿಗೆ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ. ಅಬ್ದುಲ್ ರಹ್ಮಾನ್ ಕೃತಜ್ಞತೆ ಸಲ್ಲಿಸಿದ್ದಾರೆ.