ಹೃದಯಾಘಾತದಿಂದ ದೈಹಿಕ ಶಿಕ್ಷಕ ಮೃತ್ಯು

ಅಜೆಕಾರು, ಆ.10: ಕೃಷಿ ಕೆಲಸ ಮಾಡುತ್ತಿರುವ ವೇಳೆ ದೈಹಿಕ ಶಿಕ್ಷಕರೊಬ್ಬರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಕಡ್ತಲ ಎಂಬಲ್ಲಿ ಆ.9ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಅಜೆಕಾರು ಕೈಕಂಬ ನಿವಾಸಿ ರಾಮಕೃಷ್ಣ ಹೆಗ್ಡೆ(56) ಎಂದು ಗುರು ತಿಸಲಾಗಿದೆ. ಇವರು ತಮ್ಮ ಕಡ್ತಲದ ಜಾಗದಲ್ಲಿ ಕೃಷಿ ಕೆಲಸ ಮಾಡುತ್ತಿರುವಾಗ ಎದೆನೋವು ಕಾಣಿಸಿಕೊಂಡಿದ್ದು, ತೀವ್ರವಾಗಿ ಅಸ್ವಸ್ಥಗೊಂಡ ಇವರು, ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರು ಮುನಿಯಾಲು ಕಾಲೇಜು ಸೇರಿದಂತೆ ವಿವಿಧೆಡೆ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಅಂತಾರಾಷ್ಟ್ರೀಯ ಕ್ರೀಡಾಪಟು ಮಮತಾ ಪೂಜಾರಿ ಸೇರಿದಂತೆ ಅನೇಕ ರಾಜ್ಯಮಟ್ಟದ ಕಬಡ್ಡಿ ಆಟಗಾರರನ್ನು ತರಬೇತಿಗೊಳಿಸಿದ್ದರು. ಮೃತರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.
Next Story