ಉಡುಪಿ; ತಿರಂಗಾ ಬಣ್ಣದ ಬೆಳಕಿನಲ್ಲಿ ಕನಕ ಗೋಪುರ

ಉಡುಪಿ: ಶ್ರೀಕೃಷ್ಣ ಮಠ, ಪರ್ಯಾಯ ಶ್ರೀಕೃಷ್ಣಾಪುರ ಮಠ ಉಡುಪಿ ಆಶ್ರಯದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯದ ನೇತೃತ್ವದಲ್ಲಿ ಪಂಚಮಿ ಟ್ರಸ್ಟ್, ಗಾಂಧಿ ಆಸ್ಪತ್ರೆ ಸಹಯೋಗ ದೊಂದಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಉಡುಪಿಯ ರಥಬೀದಿಯಲ್ಲಿರುವ ಕನಕ ಗೋಪುರವು ತಿರಂಗಾ ಬಣ್ಣದ ಬೆಳಕಿನೊಂದಿಗೆ ಕಂಗೊಳಿಸಿತು.
ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪರ್ಕಳದ ನಿವೃತ್ತ ಯೋಧ ಕೃಷ್ಣ ಶೆಟ್ಟಿಬೆಟ್ಟು ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಎಸ್ಕೆಪಿಎ ಉಡುಪಿ ವಲಯ ಅಧ್ಯಕ್ಷ ಜನಾರ್ದನ್ ಕೊಡವೂರು, ಗಾಂಧಿ ಆಸ್ಪತ್ರೆಯ ಎಂಡಿ ಡಾ.ಎಂ.ಹರಿಶ್ಚಂದ್ರ, ನಗರಸಭಾ ಸದಸ್ಯ ವಿಜಯ ಕೊಡವೂರು, ರೋಟರಿ ಉಡುಪಿ ರಾಯಲ್ ಅಧ್ಯಕ್ಷ ಬಾಲಕೃಷ್ಮ ಮದ್ದೋಡಿ, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಉಪಸ್ಥಿತರಿದ್ದರು.
Next Story