ಮಂಗಳೂರು | ಆಟೋ ರಿಕ್ಷಾದಲ್ಲಿ ಸ್ಫೋಟ ಪ್ರಕರಣದ ಹಿಂದಿರುವ ಕಾಣದ ಕೈಗಳಿಗೂ ಬೇಡಿ ತೊಡಿಸಿ: ಯು.ಟಿ.ಖಾದರ್

ಮಂಗಳೂರು, ನ.21: ನಗರ ಹೊರವಲಯದ ಪಂಪ್ ವೆಲ್ ಸಮೀಪದ ನಾಗುರಿಯಲ್ಲಿ ಶನಿವಾರ ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಮಂಗಳೂರು ಶಾಸಕ, ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.
ಈ ಸಂಬಂಧ ತಪ್ಪಿತಸ್ಥ ರನ್ನು ಬಂದಿಸುವುದರ ಜೊತೆಗೆ ಅದರ ಹಿಂದಿರುವ ಕಾಣದ ಕೈಗಳಿಗೂ ಸರಕಾರ ಬೇಡಿ ತೋಡಿಸಬೇಕು. ಈ ಮೂಲಕ ಮಂಗಳೂರಿನ ನಾಗರಿಕರಲ್ಲಿರುವ ಭಯ ಮತ್ತು ಗೊಂದಲದ ವಾತಾವರಣವನ್ನ ಸರಕಾರ ದೂರ ಮಾಡಬೇಕು ಎಂದು ಖಾದರ್ ಆಗ್ರಹಿಸಿದ್ದಾರೆ.
ಮಂಗಳೂರು ಆಟೋ ಸ್ಪೋಟ ಪ್ರಕರಣವನ್ನ ಸರಕಾರ ಗಂಭೀರವಾಗಿ ಸ್ವೀಕರಿಸ ಬೇಕು.ತಪ್ಪಿತಸ್ಥ ರನ್ನ ಬಂದಿಸುವುದರ ಜೊತೆಗೆ ಅದರ ಹಿಂದಿರುವ ಕಾಣದ ಕೈಗಳಿಗೂ ಸರಕಾರ ಬೇಡಿ ತೋಡಿಸ ಬೇಕು.ಈ ಮೂಲಕ ಮಂಗಳೂರಿನ ನಾಗರೀಕರಲ್ಲಿರುವ ಭಯ ಮತ್ತು ಗೊಂದಲದ ವಾತಾವರಣವನ್ನ ಸರಕಾರ ದೂರ ಮಾಡಬೇಕು.@CMofKarnataka @BSBommai @JnanendraAraga @HMOKarnataka
— UT Khadér (@utkhader) November 21, 2022
Next Story