ಮಂಗಳೂರು: ನಕಲಿ ದಾಖಲೆ ಸೃಷ್ಟಿಸಿ ವಂಚನೆ ಆರೋಪ; ಪುತ್ರಿ ಸಹಿತ ಇಬ್ಬರ ವಿರುದ್ಧ ಪ್ರಕರಣ ದಾಖಲು

ಮಂಗಳೂರು, ಡಿ.14: ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು 1 ಕೋ.ರೂ. ಮೌಲ್ಯದ ಚಿನ್ನಾಭರಣ ಮತ್ತು 25 ಲ.ರೂ. ಗೃಹ ಸಾಲ ಪಡೆದು ವಂಚಿಸಿರುವ ಬಗ್ಗೆ ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ರೀಟಾ ಪೇರಿಸ್ ಎಂಬವರು ನೀಡಿದ ದೂರಿನಲ್ಲಿ ತನ್ನ ಪುತ್ರಿ ನಿಖಿತಾ ಪೇರಿಸ್ ಮತ್ತು ಇನ್ನೋರ್ವ ಗೋಡ್ವಿನ್ ಫೆರ್ನಾಂಡಿಸ್ ಆರೋಪಿಗಳು ಎಂದು ದೂರಿದ್ದಾರೆ.
ರೀಟಾ ಪೇರಿಸ್ ಮತ್ತವರ ಪುತ್ರ ಅಮಿತ್ ಪೇರಿಸ್ ವಿದೇಶದಲ್ಲಿದ್ದಾರೆ. ರೀಟಾ ಪೇರಿಸ್ರ ಪುತ್ರಿ ನಿಕಿತಾ ಪೇರಿಸ್ ಮುದರಂಗಡಿಯ ಗೋಡ್ವಿನ್ ಪೆರ್ನಾಂಡಿಸ್ ಎಂಬಾತನ ಜತೆ ಸೇರಿಕೊಂಡು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ರೀಟಾ ಪೇರಿಸ್, ಅಮಿತ್ ಪೇರಿಸ್ ಮತ್ತು ನಿಕಿತಾ ಪೇರಿಸ್ ಹೆಸರಿನಲ್ಲಿ ನಗರದ ಬಿಜೈನಲ್ಲಿದ್ದ ಅಪಾರ್ಟ್ಮೆಂಟ್ನ್ನು ರೀಟಾ ಪೇರಿಸ್ ಮತ್ತು ಅಮಿತ್ ಪೇರಿಸ್ ಅವರು ನಿಕಿತಾ ಪೇರಿಸ್ಗೆ ಜಿಪಿಎ ನೀಡಿದಂತೆ ಉಡುಪಿಯ ವಕೀಲರಿಂದ ನಕಲಿ ಜಿಪಿಎ ತಯಾರಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ರೀಟಾ ಪೇರಿಸ್ ಮತ್ತು ಅಮಿತ್ ಪೇರಿಸ್ ಅವರ ನಕಲಿ ಸಹಿ ಮಾಡಿ ಬ್ಯಾಂಕ್ ಮ್ಯಾನೇಜರ್ಗೆ ದಾಖಲಾತಿಗಳನ್ನು ನೀಡಿ ಫ್ಲ್ಯಾಟಿನ ಮೇಲೆ 25 ಲ.ರೂ. ಗೃಹಸಾಲ ಪಡೆದಿದ್ದಾರೆ. ಬಳಿಕ ನಕಲಿ ಸಹಿ ಮಾಡಿದ ದಾಖಲೆಯನ್ನು ನೀಡಿ ವಾಮಂಜೂರಿನ ಬ್ಯಾಂಕ್ ಖಾತೆಯ ಲಾಕರ್ನಲ್ಲಿದ್ದ ರೀಟಾ ಪೇರಿಸ್ಗೆ ಸೇರಿದ 1 ಕೋ.ರೂ. ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ. ನಕಲಿ ಸಹಿ ಮಾಡಿ ರೀಟಾ ಪೇರಿಸ್ರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ತೆಗುದುಕೊಂಡು ಹೋಗಿ ವಂಚಿಸಿದ್ದಾರೆ ಎಂದು ದೂರಲಾಗಿದೆ.
ಅದರಂತೆ ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.