ಯಕ್ಷಗಾನ ರಂಗಸ್ಥಳದಲ್ಲೇ ಹೃದಯಾಘಾತ: ಕಟೀಲು ಮೇಳದ ಕಲಾವಿದ ನಿಧನ

ಮಂಗಳೂರು: ಯಕ್ಷಗಾನ ನಡೆಯುತ್ತಿದ್ದಾಗ ರಂಗಸ್ಥಳದಲ್ಲೇ ಹೃದಯಾಘಾತವಾಗಿ ಕಟೀಲು ಮೇಳದ ಕಲಾವಿದರೊಬ್ಬರು ನಿಧನರಾಗಿದ್ದಾರೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ನಾಲ್ಕನೇ ಮೇಳದ ಕಲಾವಿದ ಗುರುವಪ್ಪ ಬಾಯಾರು ( 58) ಮೃತಪಟ್ಟವರು.
ಕಟೀಲು ಕ್ಷೇತ್ರದ ಸರಸ್ವತೀ ಸದನದಲ್ಲಿ ಗುರುವಾರ ತ್ರಿಜನ್ಮ ಮೋಕ್ಷ ಯಕ್ಷಗಾನ ನಡೆಯುತ್ತಿದ್ದ ಸಂದರ್ಭ ಶಿಶುಪಾಲನ ಪಾತ್ರಧಾರಿಯಾಗಿದ್ದ ಗುರುಪಪ್ಪ ಬಾಯರು ರಂಗಸ್ಥಳದಲ್ಲೇ ಇದ್ದರು. ಇನ್ನೊಂದು ಪಾತ್ರಧಾರಿ ಯಕ್ಷಗಾನದ ರಂಗಸ್ಥಳದಲ್ಲಿ ಕುಣಿಯುತ್ತಿದ್ದಾಗ ಅಲ್ಲೇ ಇದ್ದ ಗುರುವಪ್ಪ ಬಾಯಾರು ಅವರಿಗೆ ಹೃದಾಯಾಘಾತವಾಗಿ ರಂಗಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಮಂಗಳೂರಿನ ಅಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ.
Next Story