ವಿಟ್ಲ: ಚುನಾವಣಾ ಪೂರ್ವ ತಯಾರಿ ಕಾರ್ಯಾಗಾರ

ವಿಟ್ಲ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಮತ್ತು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಬ್ಲಾಕ್ ಸಮಿತಿ ವತಿಯಿಂದ ಚುನಾವಣಾ ಪೂರ್ವ ತಯಾರಿಯಾಗಿ ಸಂಘನೆಗೆ ಒತ್ತು ನೀಡುವಂತೆ ತರಬೇತಿ ಕಾರ್ಯಗಾರ ಕುಡ್ತಮುಗೇರು ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆಯಿತು.
ಕೊಳ್ನಾಡು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕೊಳ್ನಾಡು, ಸಾಲೆತ್ತೂರು,ಕನ್ಯಾನ,ಕರೋಪಾಡಿ,ಮಂಚಿ ಹಾಗೂ ನೆರೆಯ ವಿಟ್ಲಪಡ್ನೂರು ಒಳಗೊಂಡ ವಲಯ ಮಟ್ಟದ ಕಾರ್ಯಕ್ರಮ ಬಿ.ಎಲ್.ಎ ಗಳು,ಬೂತ್ ಅಧ್ಯಕ್ಷರುಗಳು, ಕಾರ್ಯದರ್ಶಿಗಳು,ಪಂಚಾಯತ್ ಸದಸ್ಯರು ಭಾಗವಹಿಸಿದ್ದರು.
ಮಾಜಿ ಸಚಿವ ಬಿ.ರಮನಾಥ ರೈ ಅಧ್ಯಕ್ಷತೆ ವಹಿಸಿದ್ದು, ಬೆಳಗಿಸಿ ಉದ್ಘಾಟಿಸಿದರು. ಕೆ.ಪಿ.ಸಿ.ಸಿ. ಪ್ಯಾನಲಿಸ್ಟ್ ಹಾಗೂ ಸಂವಾದಕ ಅಮೃತ್ ಶೆಣೈ ತರಭೇತಿ ನೀಡಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ,ಕೆ.ಪಿ.ಸಿ.ಸಿ. ಸದಸ್ಯ ಪಿಯೂಷ್ ಎಲ್ ರೋಡ್ರಿಗಸ್,ಎಂ.ಎಸ್ ಮಹಮ್ಮದ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಚಂದ್ರ ಪ್ರಕಾಶ್ ಶೆಟ್ಟಿ, ಉಮನಾಥ ಶೆಟ್ಟಿ ಪೆರ್ನೆ, ತಾಲ್ಲೂಕು ಪಂಚಾಯತ್ ಮಾಜಿ ಉಪಾದ್ಯಕ್ಷ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ,ಅರ್ಶದ್ ಶರವು,ಇಬ್ರಾಹಿಂ ನವಾಜ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸುಭಾಶ್ಚಂದ್ರ ಶೆಟ್ಟಿ ವಂದಿಸಿದರು.