ಕುಂದಾಪುರ ಚರ್ಚಿನಲ್ಲಿ ಸಂತ ಜೊಸೇಪ್ ವಾಜ್ರ ವಾರ್ಷಿಕ ಹಬ್ಬ

ಕುಂದಾಪುರ: ಕುಂದಾಪುರ ರೋಜರಿ ಅಮ್ಮನವರ ಚರ್ಚಿನಲ್ಲಿ ಸಂತ ಜೋಸೆಪ್ ವಾಜ್ ವಾರ್ಷಿಕ ಹಬ್ಬವನ್ನು ಜ.14ರಂದು ವಲಯ ಮಟ್ಟದಲ್ಲಿ ಆಚರಿಸಲಾಯಿತು.
ಮಂಗಳೂರು ದೆರೆಬೈಲ್ ಚರ್ಚಿನ ಧರ್ಮಗುರು ವಂ.ಜೋಸೆಪ್ ಮಾರ್ಟಿಸ್ ಪವಿತ್ರ ಬಲಿದಾನವನ್ನು ಅರ್ಪಿಸಿ, ಸಂತ ಜೋಸೆಪ್ ವಾಜ್ ಕ್ರಿಸ್ತನ ನೀಜ ಸೇವಕಾನಾಗಿದ್ದರು. ಅವರೊಬ್ಬ ರಾಜಿ ಸಂಧಾನದ ದೂತ. ಇಂತಹ ಮಾಹಾನ ಸಂತರು ನಿಮ್ಮ ಇಗರ್ಜಿಯ ಧರ್ಮಗುರುಳಾಗಿದ್ದವರೆಂದು ನೀವು ತುಂಬಾ ಹೆಮ್ಮೆ ಪಟ್ಟುಕೊಳ್ಳಬೇಕೆಂದು ಸಂದೇಶ ನೀಡಿದರು.
ಹಬ್ಬದಲ್ಲಿ ಪಿಯುಸ್ ನಗರ್ ಇಗರ್ಜಿಯ ಧರ್ಮಗುರು ವಂ.ಆಲ್ಬರ್ಟ್ ಕ್ರಾಸ್ತಾ, ತಲ್ಲೂರು ಇಗರ್ಜಿಯ ಧರ್ಮಗುರು ವಂ.ಎಡ್ವಿನ್ ಡಿಸೋಜ, ಕುಂದಾಪುರ ಇಗರ್ಜಿಯ ಸಹಾಯಕ ಧರ್ಮಗುರು ವಂ.ಅಶ್ವಿನ್ ಅರಾನ್ಹಾ ಸಹಬಲಿದಾನದಲ್ಲಿ ಭಾಗಿಯಾಗಿದ್ದರು.
ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರು ಅ.ವಂ.ಸ್ಟ್ಯಾನಿ ತಾವ್ರೊ ಬಲಿದಾನದಲ್ಲಿ ಭಾಗಿಯಾಗಿ ಹಬ್ಬದ ಶುಭಾಶಯಗಳನ್ನು ನೀಡಿ, ವಂದನೆ ಅರ್ಪಿಸಿದರು. ಈ ವಾರ್ಷಿಕ ಹಬ್ಬದಲ್ಲಿ, ಹಲವಾರು ಧರ್ಮಭಗಿನಿಯರು, ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.