ಮಂಗಳೂರು| ಉದ್ಯಮಿಗೆ ಜೀವ ಬೆದರಿಕೆ ಅರೋಪ; ಪ್ರಕರಣ ದಾಖಲು

ಮಂಗಳೂರು: ನಗರದ ಬಂದರು ವ್ಯಾಪ್ತಿಯ ಉದ್ಯಮಿಗೆ ದುಷ್ಕರ್ಮಿಗಳ ತಂಡವೊಂದು ಜೀವ ಬೆದರಿಕೆಯೊಡ್ಡಿರುವುದಾಗಿ ಪ್ರಕರಣ ಬಂದರು ಠಾಣೆಯಲ್ಲಿ ದಾಖಲಾಗಿದೆ.
ಬಂದರು ಪ್ರದೇಶದ ಪಟಾಕಿ ಅಂಗಡಿ ಮಾಲಕ ಮುರಳೀಧರ ಪೈಗೆ ರವಿವಾರ ಸಂಜೆ 6:30ಕ್ಕೆ ಕರೆ ಮಾಡಿದ ವ್ಯಕ್ತಿಯೊಬ್ಬ 5 ಲಕ್ಷ ರೂ. ಮೌಲ್ಯದ ಪಟಾಕಿ ಬೇಕಾಗಿದ್ದು, ನಗರದ ಹೋಟೆಲ್ ಗೆ ಬರಬೇಕೆಂದು ಸೂಚಿಸಿದ್ದ ಎನ್ನಲಾಗಿದೆ. ಅಲ್ಲಿಗೆ ಬರಲು ಸಾಧ್ಯವಿಲ್ಲ ಎಂದು ಮುರಳೀಧರ ಪೈ ತಿಳಿಸಿದ್ದರು ಎಂದು ಹೇಳಲಾಗಿದೆ.
ಸೋಮವಾರ ಮಧ್ಯಾಹ್ನ 2ಕ್ಕೆ ಮುರಳೀಧರ ಪೈ ತನ್ನ ಅಂಗಡಿಯಲ್ಲಿದ್ದಾಗ ತನ್ನ ಪರಿಚಯಸ್ಥರೇ ಆದ ದಿನೇಶ್ ಶೆಟ್ಟಿ ಹಾಗೂ ಇತರ 4 ಮಂದಿ ಏಕಾಏಕಿ ಅಂಗಡಿಗೆ ನುಗ್ಗಿ 5 ಲಕ್ಷ ರು. ಹಣ ಕೊಡಬೇಕು, ಇಲ್ಲವಾದರೆ ಶೂಟ್ ಮಾಡಿ ಕೊಲ್ಲುವುದಾಗಿ ಬೆದರಿಕೆಯೊಡ್ಡಿ ಕೆನ್ನೆಗೆ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ ದೂರಿನಲ್ಲಿ ತಿಳಿಸಲಾಗಿದೆ.
ಈ ಕೃತ್ಯದ ಹಿಂದೆ ಭೂಗತ ಲೋಕದ ಪಾತಕಿಯೊಬ್ಬನ ಕೈವಾಡ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story