ಉಪ್ಪಿನಂಗಡಿ: ಶಬೇ ಮಿಹ್ರಾಜ್ ಆಧ್ಯಾತ್ಮಿಕ ಮಜ್ಲಿಸ್ ಪ್ರಚಾರ ಸಭೆ

ಉಪ್ಪಿನಂಗಡಿ: ಜಾಮಿಅ ದಾರುಸ್ಸಲಾಂ ನಂದಿ ಇದರ 47ನೇ ವಾರ್ಷಿಕ ಹಾಗೂ ೧೫ನೇ ಸನದು ದಾನ ಮಹಾಸಮ್ಮೇಳನದ ಪ್ರಚಾರಾರ್ಥ ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಆಶ್ರಯದಲ್ಲಿ ಸಮಸ್ತದ ಪೋಷಕ ಸಂಘಟನೆಗಳ ಸಹಕಾರದೊಂದಿಗೆ ಮಾಣಿಯ ಜನಪ್ರಿಯ ಮೈದಾನದಲ್ಲಿ ಫೆ.೧೮ರಂದು ನಡೆಯಲಿರುವ ವಿಶೇಷ ಶಬೆ ಮಿಹ್ರಾಜ್ ಮಜ್ಲಿಸ್ ಹಾಗೂ ಸುನ್ನೀ ಸಮಾವೇಶದ ಪ್ರಚಾರ ಸಭೆಯು ಉಪ್ಪಿನಂಗಡಿ ಕೇಂದ್ರ ಮಸೀದಿಯ ಸಭಾಂಗಣದಲ್ಲಿ ನಡೆಯಿತು.
ಜಮಾಅತ್ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಮಾತನಾಡಿ ಸಮಸ್ತದ ಕಾರ್ಯ ಚಟುವಟಿಕೆಯಲ್ಲಿ ದಾರಿಮಿ ಉಲಮಾಗಳೇ ಸಕ್ರಿಯರಾಗಿದ್ದರು. ಎಲ್ಲಾ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ ದಾರಿಮಿಗಳ ಸಾಮಾಜಿಕ ಕೊಡುಗೆ ಅಪಾರ ಎಂದರು.
ಸ್ಥಳೀಯ ಮುದರ್ರಿಸ್ ಸಲಾಂ ಫೈಝಿ, ರಾಜ್ಯ ಉಲಮಾ ಒಕ್ಕೂಟದ ಎಸ್ಬಿ ದಾರಿಮಿ, ಹೈದರ್ ದಾರಿಮಿ ಕರಾಯ, ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿದರು.
ಶುಕೂರ್ ಹಾಜಿ, ಇಸ್ಮಾಯಿಲ್ ತಂಳ್, ಅಶ್ರಫ್ ಹಾಜಿ, ಸಿಟಿ ಯೂಸುಫ್ ಹಾಜಿ ಪೆದ್ಮಲೆ, ಆದಂ ದಾರಿಮಿ ಅಜ್ಜಿಕಟ್ಟೆ, ಇಸ್ಮಾಯಿಲ್ ದಾರಿಮಿ ಕೋಡಿಯಾಡಿ, ಉಸ್ಮಾನ್ ದಾರಿಮಿ ಹಳೆಗೇಟು, ಶುಕೂರ್ ಹಾಜಿ ಮೈನ, ಮುಹಮ್ಮದ್ ಕೂಟೆಲ್, ಮುಹಮ್ಮದಲಿ ಉಸ್ತಾದ್ ಜೊಗಿಬೆಟ್ಟು, ಹನೀಫ್ ದಾರಿಮಿ ನೆಕ್ಕಿಲಾಡಿ, ಶಬೀರ್ ಕೆಂಪಿ, ಇರ್ಷಾದ್ ಯುಟಿ, ಅಶ್ರಫ್ ಅಗ್ನಾಡಿ, ಅಬ್ಬಾಸ್ ಕುಂತೂರು ಉಪಸ್ಥಿತರಿದ್ದರು. ಅಲ್ ಬಿರ್ರ್ ರಾಜ್ಯ ಕೊ-ಆರ್ಡಿನೇಟರ್ ಶುಕೂರ್ ದಾರಿಮಿ ಕರಾಯ ಸ್ವಾಗತಿಸಿದರು.