ಕನ್ನಡಕ್ಕೆ ಯಕ್ಷಗಾನದ ಕೊಡುಗೆ ಅಪಾರ :ಪಟ್ಲ ಸತೀಶ್ ಶೆಟ್ಟಿ

ಮಂಗಳೂರು: ಯಕ್ಷಗಾನ ಇಂದು ಕೇವಲ ಕಲೆಯಾಗಿ ಉಳಿದಿಲ್ಲ. ಒಂದು ಧಾರ್ಮಿಕ ಆಚರಣೆಯಾಗಿದೆ. ಯಾವುದೇ ಪಾತ್ರಗಳನ್ನು ಪ್ರೇಕ್ಷಕರ ಮನಸ್ಸಿಗೆ ಮುಟ್ಟುವ ರೀತಿ ತೋರಿಸಿಕೊಡುವ ಶಕ್ತಿ ಯಕ್ಷಗಾನಕ್ಕಿದೆ. ಯಕ್ಷಗಾನ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರದೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ನ ಸ್ಥಾಪಕಾಧ್ಯಕ್ಷ ಸತೀಶ ಶೆಟ್ಟಿ ಪಟ್ಲ ಅಭಿಪ್ರಾಯಪಟ್ಟಿದ್ದಾರೆ.
ಲಿಟ್ ಫೆಸ್ಟ್ ಕಾರ್ಯಕ್ರಮದಲ್ಲಿ ಪ್ರಸಕ್ತ ಕಾಲಘಟ್ಟದಲ್ಲಿ ಯಕ್ಷಗಾನ ಕುರಿತು ಮಾತನಾಡಿದರು.
ನಮ್ಮ ಪುರಾಣವನ್ನು ಮನೆಮನೆಗೆ ತಲುಪಿಸಿದ ಹಿರಿಮೆ ಯಕ್ಷಗಾನದ್ದು. ಬೇರೆ ಯಾವುದೇ ಕಲಾಪ್ರಕಾರದಲ್ಲಿ ಭಾಗವತ ಎಂಬ ಕಲ್ಪನೆಯೇ ಇಲ್ಲ. ಭಾಗವತ ಅಂದ್ರೆಕಥೆಯ ಸೂತ್ರಧಾರಿ. ಕಥೆಯನ್ನು ಪ್ರೇಕ್ಷಕರಿಗೆ ಮುಟ್ಟಿಸುವಲ್ಲಿ ಅವನ ಪಾತ್ರದೊಡ್ದದು ಎಂದರು.
ಸಿಎ ಪಾಸ್ ಮಾಡುವುದು ಅಂದರೆ ತುಂಬಾ ಕಠಿಣವಾದ ಸವಾಲು. ಅಂಥ ಸಂದರ್ಭದಲ್ಲಿ ನೀವು ಯಕ್ಷಗಾನದತ್ತ ಹೇಗೆ ಬಂದಿರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎ ವೃಂದಾಕೊನ್ನಾರ್ ಅವರು, ನನ್ನ ಜೀವನದಲ್ಲಿ ಯಕ್ಷಗಾನ ಮೊದಲೇ ಇತ್ತು. ಸಿಎ ಆಮೇಲೆ ಬಂದದ್ದು. ಬಾಲ್ಯದಲ್ಲಿಅಮ್ಮನ ಮಡಿಲಲ್ಲಿ ಯಕ್ಷಗಾನ ನೋಡುತ್ತಾ ಬೆಳೆದೆ. ಚೆಂಡೆ ಮದ್ದಲೆಗಳ ನಾದದೊಂದಿಗೆ ಬೆಳೆದೆ. ಯಾವುದೇಕಲೆಯಾಗಲಿ ಅದು ನಿಮ್ಮ ವಿದ್ಯಾಭ್ಯಾಸಕ್ಕೆ ಎಂದಿಗೂ ತೊಡಕುಂಟುಮಾಡುವುದಿಲ್ಲ. ಅದು ಪೂರಕವೇಆಗುತ್ತದೆ ಎಂದರು. ಪುರುಷೋತ್ತಮ ಭಂಡಾರಿ ಸಂವಾದವನ್ನು ನಡೆಸಿಕೊಟ್ಟರು.
ಸಿನೆಮಾ ಮತ್ತು ಸಂಸ್ಕೃತಿ: ಮಾಳವಿಕ ಅವಿನಾಶ್ ಸಿನಿಮಾ ಮತ್ತು ನಮ್ಮ ಸಂಸ್ಕೃತಿಯ ಕುರಿತು ಮಾತನಾಡಿ ನಾವು ಭಾರತೀಯರು. ಎಲ್ಲರನ್ನೂ ನಮ್ಮವರು ಅಂತ ಅಂದುಕೊಳ್ಳುವವರು. ಏಳು ಲೋಕಗಳೂ ನಮ್ಮವು ಅಂತ ಅಂದುಕೊಳ್ಳುವವರು.
ರಿಷಬ್ ಶೆಟ್ಟಿ ಅವರು ಮಾತನಾಡಿ, ನನಗೆ ಅಜ್ಜಿಕಥೆ ಮೇಲೆ ನಂಬಿಕೆ ಜಾಸ್ತಿ. ವೆಸ್ಟರ್ನ್ ಅಜ್ಜಿ ಇರಬಹುದು ಅಥವಾ ಇಲ್ಲಿಯವರು ಇರಬಹುದು. ನಾನು ಓದುವುದರಲ್ಲಿ ಹಿಂದೆ. ಆದರೆ ಪುರಾಣ ಕಥೆಗಳ ಪ್ರತಿ ಜನಪದದಿಂದ ನಮ್ಗೆ ಸಿಗ್ತಾ ಇದೆ. ಭಾರತದಯಾವುದೇ ಮೂಲೆಯಲ್ಲಿ ಪ್ರಕೃತಿ ಮಾತೆಯನ್ನ, ಶಕ್ತಿಯನ್ನ ಆರಾಧನೆ ಮಾಡುವಂಥದ್ದು ಇದೆ. ಇದು ಪ್ರಪಂಚದ ಯಾವುದೇ ಮೂಲೆಗೆ ಹೋದ್ರೂಇದೆ. ಹಾಗಾಗಿ ಇದು ಜಾಗತಿಕವೇ. ಅಮ್ಮನ ಪ್ರೀತಿ ಜಾಗತಿಕವಾಗಿ ಇರುವುದು ಎಂದರು.
ಪ್ರಕಾಶ್ ಬೆಳವಾಡಿ ಅವರು ಇವತ್ತಿನ ದೃಶ್ಯಾವಳಿಯೇ ಬದಲಾಗಿದೆ. ಕಲಾತ್ಮಕ ಸಿನಿಮಾ ಯಶಸ್ವಿಯಾಗಿದೆ ಎಂದು ಹೇಳಿದರು.
ಅಶ್ವಿನಿ ಅಯ್ಯರ್ ಮಾತನಾಡಿ ನಾವು ಕಥೆ ಮಾಡುವಾಗ ನಮ್ಮ ಸಂಸ್ಕೃತಿಗೆ ಸಂಪರ್ಕ ಆಗುವ ರೀತಿಯಲ್ಲಿ ಮಾಡಬೇಕು. ಅದ್ರಲ್ಲೂ ವಿಶೇಷವಾಗಿ, ಭಾರತದಿಂದ ನಮ್ಮ ಕಥೆಯನ್ನುಜಗತ್ತಿಗೆ ಹೇಳುವಾಗ ಜಾಸ್ತಿ ವರ್ಕ್ ಮಾಡಬೇಕು.
ಮಾಧ್ಯಮ ಮತ್ತು ಅಖ್ಯಾಯಿಕೆ : ಪ್ರಾದೇಶಿಕ, ರಾಷ್ಟ್ರೀಯ ಮತ್ತು ಜಾಗತಿಕ ಎಂಬ ಅಸ್ಮಿತೆಗಳು; ಒಂದು ವಿವೇಚನೆ : ಈ ಬಗ್ಗೆ ಅಜಿತ್ ಹನಮಕ್ಕನವರ್ ಮಾತನಾಡಿ, ಮಾಧ್ಯಮಗಳು ಹೇಳಿದ್ದನ್ನು ಜನ ತೆಗೆದು ಕೊಳ್ಳಬೇಕು ಎಂದಿಲ್ಲ, ಅವರಿಗೆ ಮಾಧ್ಯಮ ಹೇಳಿದ್ದನ್ನು ಪರಾಮರ್ಶಿಸುವ ಬುದ್ಧಿಶಕ್ತಿ ಇರುತ್ತದೆ, ಸತ್ಯ ಸುಳ್ಳನ್ನು ತಿಳಿಯಲು ಹಲವು ಮಾರ್ಗಗಳು ಇರುತ್ತವೆ. ಒಬ್ಬ ಕೆಟ್ಟ ಮನುಷ್ಯನನ್ನು ಮಾಧ್ಯಮಗಳು ಎಷ್ಟು ಪಾಸಿಟಿವ್ ಆಗಿ ತೋರಿಸಿದರೂ ಜನ ಒಪ್ಪುವುದಿಲ್ಲ, ಒಳ್ಳೆಯವನನ್ನು ಕೆಟ್ಟವನಾಗಿ ತೋರಿಸಲೂ ಸಾಧ್ಯವಾಗುವುದಿಲ್ಲ ಎಂದರು.
ದಕ್ಕಲ ಜಾಂಬವ ಪುರಾಣ: ಹರಟೆಕಟ್ಟೆಯಲ್ಲಿ ದಕ್ಕಲ ಮುನಿಸ್ವಾಮಿ, ಘನಶ್ಯಾಮ ಮತ್ತು ಸತ್ಯಭೋದ ಜೋಶಿ ಅವರು ದಕ್ಕಲ ಜಾಂಬವ ಪುರಾಣಕುರಿತು ಸಂವಾದ ನಡೆಸಿದರು.