ಮಲ್ಲೂರು: ಫೆ.24ರಿಂದ ಸ್ವಲಾತ್ ವಾರ್ಷಿಕ, ಬುರ್ದಾ ಮಜ್ಲಿಸ್
ಮಂಗಳೂರು: ಬದ್ರಿಯಾ ನಗರದ ಅಲ್-ಮಸ್ಜಿದುಲ್ ಬದ್ರಿಯಾ ಜುಮಾ ಮಸ್ಜಿದ್ ಮಲ್ಲೂರು ಇದರ 36ನೇ ಸ್ವಲಾತ್ ವಾರ್ಷಿಕ, 6ನೇ ಮಜ್ಲಿಸುನ್ನೂರು ವಾರ್ಷಿಕ ಹಾಗೂ ಬೃಹತ್ ಬುರ್ದಾ ಮಜ್ಲೀಸ್ ಫೆ. 24ರಿಂದ 26ರವರೆಗೆ ಮಲ್ಲೂರು ಬದ್ರಿಯಾ ನಗರ ಮೈದಾನದಲ್ಲಿ ಜರುಗಲಿದೆ ಎಂದು ಮಸೀದಿಯ ಖತೀಬರಾದ ಶಮೀರ್ ದಾರಿಮಿ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಫೆ.24ರಂದು ಮುಹಮದ್ ಶರೀಫ್ ದಾರಿಮಿ ಉದ್ಘಾಟಿಸಲಿದ್ದು, ಮುಹಮ್ಮದ್ ಅಶ್ರಫ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಯ್ಯದ್ ಮನ್ನಾನಿ ಭಾಗವಹಿಸಲಿದ್ದಾರೆ. ಕೇರಳದ ಪ್ರಖ್ಯಾತ ಯುವ ವಾಗ್ಮಿ ಸ್ವಾಬಿರ್ ಮಂಜೇರಿ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಫೆ 25ರಂದು ಇಲ್ಯಾಸ್ ಅರ್ಶದಿ ಆತೂರು, ಶಫೀಕ್ ಅಲ್ ಫಾಳಿಲ್ ಕೌಸರಿ ಭಾಗವಹಿಸಲಿದ್ದಾರೆ. ಶಮೀರ್ ದಾರಿಮಿ ಮಾಡಾವು ಭಾಗವಹಿಸಲಿದ್ದಾರೆ.
ಫೆ.26-ರಂದು ಸ್ವಲಾತ್ ವಾರ್ಷಿಕ, ಮ ಜ್ಲಿಸುನ್ನೂರು ಕಾರ್ಯಕ್ರಮ ಶೈಖುನಾ ಬೊಳ್ಳೂರು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ. ಆಲಂಪಾಡಿಯ ಮುಹಮ್ಮದ್ ಸಲೀಂ ಅರ್ಶದಿ ಭಾಗವಹಿಸಲಿದ್ದಾರೆ ಎಂದು ಶಮೀರ್ ದಾರಿಮಿ ತಿಳಿಸಿದ್ದಾರೆ.
ಬೃಹತ್ ಬುರ್ದಾ ಮಜ್ಲೀಸ್ :-
ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಪ್ರಥಮ ಬಾರಿಗೆ ಆಗಮಿಸುತ್ತಿರುವ ಶಬೀರ್ ಬರಕಾತಿ, ಫಾರೂಕ್ ಬರಕಾತಿ ನೇತೃತ್ವದ ಸೌತ್ ಆಫ್ರಿಕಾ ತಂಡದಿಂದ ಫೆ.26ರಂದು ಮಲ್ಲೂರು ಬದ್ರಿಯಾ ನಗರದಲ್ಲಿ ಬೃಹತ್ ಬುರ್ದಾ ಮಜ್ಜಿಸ್ ಕಾರ್ಯಕ್ರಮ ನಡೆಯಲಿರುವುದು.
ಈ ಕಾರ್ಯ ಕ್ರಮದಲ್ಲಿ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ಉದ್ಯಮಿ ಗಳಾದ ಅಬ್ದುಲ್ ಲತೀಫ್ ಗುರುಪುರ, ನೌಫಲ್ ಉದ್ದಬೆಟ್ಟು, ಸಿದ್ದೀಕ್ ಬೈಟ್, ಯು.ಪಿ. ಇಬ್ರಾಹಿಂ ಅಡೂರು ಸೇರಿದಂತೆ ಹಲವಾರು ಧಾರ್ಮಿಕ ಹಾಗೂ ರಾಜಕೀಯ ಗಣ್ಯರು ಭಾಗವಹಿಸ ಲಿದ್ದಾರೆ ಎಂದು ಶಮೀರ್ ದಾರಿಮಿ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಸೀದಿಯ ಅಧ್ಯಕ್ಷ ಮುಹಮ್ಮದ್ ಅಶ್ರಫ್,ಮಾಜಿ ಅಧ್ಯಕ್ಷರಾದ ಎಮ್.ಕೆ ಯೂಸುಫ್, ಅಸ್ರಾರುದ್ದೀನ್ , ಕೋಶಾಧಿಕಾರಿ ಮನ್ಸೂರ್ ಉಪಸ್ಥಿತರಿದ್ದರು.