ಬ್ರಹ್ಮಾವರ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬಿ.ಜಗದೀಶ್ ಶೆಟ್ಟಿ

ಉಡುಪಿ, ಫೆ.25: ಬ್ರಹ್ಮಾವರ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನ-2023ರ ಸರ್ವಾಧ್ಯಕ್ಷರಾಗಿ ಇತಿಹಾಸ ಸಂಶೋಧಕ ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ.ಬಿ.ಜಗದೀಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಸಮ್ಮೇಳನವು ಮಾ.4ರಂದು ಚೇರ್ಕಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೇತ್ರಿ ಇಲ್ಲಿ ನಡೆಯಲಿದೆ. ಬ್ರಹ್ಮಾವರ ಸಮೀಪದ ಹಂದಾಡಿಯವರಾದ ಡಾ.ಬಿ.ಜಗದೀಶ್ ಶೆಟ್ಟಿ ಪ್ರಸ್ತುತ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಸಾಹಿತಿ ರಾಮಭಟ್ಟ ಸಜಂಗದ್ದೆ ಹಾಗೂ ಕಚ್ಚೂರು ಮಾಲ್ತಿದೇವಿ ದೇವಸ್ಥಾನದ ಧರ್ಮದರ್ಶಿ ಗೋಕುಲದಾಸ್ ಬಾರಕೂರು ಅವರು ಬಾರಕೂರಿನ ಕಲ್ಚಪ್ರದಲ್ಲಿ ಬಿಡುಗಡೆಗೊಳಿಸಿದರು.
Next Story