WPL: ಆರ್‌ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ 9 ವಿಕೆಟ್ ಸುಲಭ ಜಯ

ಮುಂಬೈ, ಮಾ.6: ಬ್ಯಾಟಿಂಗ್‌ನಲ್ಲೂ ಮಿಂಚಿದ ಹೇಲಿ ಮ್ಯಾಥ್ಯೂಸ್(77 ರನ್) ಹಾಗೂ ನ್ಯಾಟ್ ಬ್ರಂಟ್(55 ರನ್) ಅರ್ಧಶತಕದ ಕೊಡುಗೆಯ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ವಿರುದ್ಧದ ಡಬ್ಲುಪಿಎಲ್‌ನ 4ನೇ ಪಂದ್ಯವನ್ನು 9 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತು.
ಸೋಮವಾರ ನಡೆದ ಪಂದ್ಯದಲ್ಲಿ ಗೆಲ್ಲಲು 156 ರನ್ ಗುರಿ ಪಡೆದ ಮುಂಬೈ 14.2 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು.
ಇದಕ್ಕೂ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆರ್‌ಸಿಬಿ ತಂಡ ಮ್ಯಾಥ್ಯೂಸ್(3-28) ದಾಳಿಗೆ ಸಿಲುಕಿ 155 ರನ್‌ಗೆ ಆಲೌಟಾಯಿತು.
Next Story