ಉಷಾ ಎಂ ದತ್ತಿನಿಧಿ ವಿದ್ಯಾರ್ಥಿ ವೇತನ ವಿತರಣೆ

ಮಂಗಳೂರು: ಸ್ಥಳೀಯ ಬಿ.ಎಂ. ಪ್ರೌಢಶಾಲೆಯ ನಿವೃತ್ತ ಕನ್ನಡ ಭಾಷಾ ಸಹಾಯಕಿಯಾಗಿರುವ ಉಷಾ.ಎಂ ಅವರ ದತ್ತಿನಿಧಿ ವಿದ್ಯಾರ್ಥಿ ವೇತನ ವಿತರಣಾ ಕಾರ್ಯ ಕ್ರಮವು ಮುಖ್ಯ ಶಿಕ್ಷಕಿ ಜಯವಂತಿ ಸೋನ್ಸ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಶಾಲಾ ಸಭಾಂಗಣದಲ್ಲಿ ನೆರವೇರಿತು.
2021-2022 ನೆಯ ಶೈಕ್ಷಣಿಕ ವರ್ಷದಲ್ಲಿ ಜರುಗಿದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಾಲಾ ಮಟ್ಟದಲ್ಲಿ ಗರಿಷ್ಠ ಅಂಕ ಗಳಿಸಿರುವ ಕು.ಸಹನಾ ಮತ್ತು ಪ್ರಥಮ ಭಾಷೆ ಕನ್ನಡದಲ್ಲಿ ಗರಿಷ್ಠ ಅಂಕಗಳಿಸಿರುವ ಕು.ಆಸಿಯಾ ಮುಶ್ರೀಫಾ ಎಂ.ಎಂಬ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಡಾ.ಇಸ್ಮಾಯಿಲ್ ಎನ್ ಅವರು ಪ್ರಾಸ್ತಾವಿಕ ಮಾತುಗಳ ಮೂಲಕ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು. ವಿದ್ಯಾರ್ಥಿ ವೇತನವನ್ನು ವಿತರಿಸಿದ ಉಷಾ.ಎಂ ಅವರು ಫಲಾನುಭವಿಗಳನ್ನು ಅಭಿನಂದಿಸಿದರು.
ಹಿರಿಯ ಶಿಕ್ಷಕ ಯೋಗೀಶ್.ಕೆ ಅವರು ಸ್ವಾಗತಿಸಿದರು, ಧನಲಕ್ಷ್ಮೀ ಟೀಚರ್ ವಂದಿಸಿದರು. ಅನಿತಾ ಟೀಚರ್ ಕಾರ್ಯ ಕ್ರಮವನ್ನು ನಿರೂಪಿಸಿದರು. ಹತ್ತನೆಯ ತರಗತಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕ, ಶಿಕ್ಷಕಿಯರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.