ಮಂಗಳೂರಿನ ಹೊಟೇಲ್ ಮೋತಿಮಹಲ್ ನಲ್ಲಿ ಬ್ರಾಂಡೆಡ್ ರೆಡಿಮೇಡ್ ಡ್ರೆಸ್ಗಳ ಮಾರಾಟ, ಪ್ರದರ್ಶನ
ಮಾ.12ರಂದು ಕೊನೆಯ ದಿನ

ಮಂಗಳೂರು, ಮಾ.11: ನಗರದ ಫಳ್ನೀರ್ ರಸ್ತೆಯಲ್ಲಿರುವ ಹೊಟೇಲ್ ಮೋತಿಮಹಲ್ನಲ್ಲಿ ಕಳೆದ ಏಳು ದಿನಗಳಿಂದ ನಡೆಯುತ್ತಿರುವ ಸಿದ್ಧ ಉಡುಪುಗಳ ಹೊಸ ಸ್ಟಾಕಿನ ಭಾರೀ ರಿಯಾುತಿ ಮಾರಾಟವು ಮಾ.12 (ರವಿವಾರ)ರಂದು ಕೊನೆಗೊಳ್ಳುತ್ತಿದೆ.
ಆರ್ಥಿಕ ಸಂಕಷ್ಟದಿಂದಾಗಿ ಭಾರೀ ನಷ್ಟ ಅನುಭಸಿದ ಮಿಲ್ಗಳ ಎಲ್ಲಾ ಸರಕುಗಳನ್ನು ಮಾರಾಟ ಮಾಡಿ ನಷ್ಟ ಭರಿಸುವ ಕಾರ್ಯದಲ್ಲಿ ತೊಡಗಿರುವ ಈ ಪ್ರದರ್ಶನದ ಸಂಘಟಕರು ಶೇ.80ನವರೆಗೆ ಭಾರೀ ರಿಯಾಯಿತಿ ದರದಲ್ಲಿ ಹಲವಾರು ಸುಪ್ರಸಿದ್ಧ ಬ್ರಾಂಡ್ಗಳ ರೆಡಿಮೇಡ್ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ಧೇಶದಿಂದ ಆಯೋಜನೆಗೊಂಡ ಈ ಮಾರಾಟ ಮೇಳದಲ್ಲಿ ಮಂಗಳೂರು ಜನತೆಗೆ ಶಾಪಿಂಗ್ನ ಕೊನೆಯ ಅವಕಾಶವಾಗಿರುತ್ತದೆ.
ಈ ಮಾರಾಟ ಮೇಳದಲ್ಲಿ ಬಾಲಕರು ಮತ್ತು ಬಾಲಕಿಯರಿಗೆ ಬೇಕಾಗುವಂತಹ ರೆಡಿಮೇಡ್ ಗಾರ್ಮೆಂಟ್ಸ್ ಕೇವಲ ರೂ.100ರಿಂದ 250ರವರೆಗೆ, ಹುಡುಗಿಯರು ಮತ್ತು ಮಹಿಳೆಯರ ರೆಡಿಮೇಡ್ ಉಡುಪುಗಳು ಕೇವಲ ರೂ.150ರಿಂದ 250 ರೂ.ರವರೆಗೆ, ಪುರುಷರ ಬಿಗ್ ಬ್ರಾಂಡ್ ರೆಡಿಮೇಡ್ ಡ್ರೆಸ್ಗಳ ವೈವಿಧ್ಯಮಯ ಜೀನ್ಸ್ಪ್ಯಾಂಟ್, ಕಾಟನ್ ಪ್ಯಾಂಟ್, ಸಿಲ್ಕಿ ಸ್ಟೆಚ್, ಚಿನ್ಯೂಸ್ ಕಾಟನ್ಗಳಲ್ಲದೆ ಪಾರ್ಟಿವೇರ್ ಬಿಸಿನೆಸ್ ಕ್ಲಾಸ್, ಆಫೀಸ್ ವೇರ್, ಫಾರ್ಮಲ್, ಕ್ಯಾಶ್ಯೂಲ್ಸ್ ಇತ್ಯಾದಿ ಲಭ್ಯವಿದೆ.
ಪುರುಷರ ಪ್ರಖ್ಯಾತ ಬ್ರಾಂಡ್ ಡೇನಿಯಲ್, ಹೆಕ್ಟರ್, ಇಂಡಿಯನ್ ಟೆರೈನ್, ಕಲರ್ ಪ್ಲಸ್, ಇರೆಡ್, ಸ್ಕಲರ್ಸ್, ಇಂಡಿಗೊ ನೇಶನ್, ನೆಟ್ ಪ್ಲೈ ವೇರ್ ಇತ್ಯಾದಿ ಲಭ್ಯವಿದೆ. ಮಹಿಳೆಯರಿಗಾಗಿ ಲೇಡೀಸ್ ಕುರ್ತೀಸ್, ಪಾಶ್ಚಿಮಾತ್ಯ ಡ್ರೆಸುಗಳ ಬ್ರ್ಯಾಂಡ್ ವೆರ್ಮೋಡಾ, ಜಾಕ್ ಜೋನ್ಸ್, ಬಿಟಾ, ಅಜಿಯೊ, ಅಬೋಪ್ ಇಲ್ಲಿ ದೊರೆಯುತ್ತವೆ.
ಅದಲ್ಲದೆ ರಾಜಸ್ತಾನಿ ರಾಯಲ್ ಪ್ರಿಂಟೆಡ್ ಬೆಡ್ಶೀಟ್ಗಳು, ಪಿಲ್ಲೋಕವರ್, ಸೋಫಾ ಕವರ್ ಇತ್ಯಾದಿಗಳಲ್ಲದೆ ಲೇಡಿಸ್ ಮತ್ತು ಜಂಟ್ಸ್ ಒಳಉಡಪುಗಳು ಮಾರಾಟ ಮಾಡಲಾಗುತ್ತಿದ್ದು, ರವಿವಾರ ಕೊನೆಗೊಳ್ಳುವ ಈ ಮಾರಾಟ ಮೇಳದ ಸದುಪಯೋಗಪಡೆದುಕೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.