ಹೂಡೆ: ಮದ್ರಸ ಉಬೈ ಬಿನ್ ಕಾಬ್ ವಾರ್ಷಿಕ ಕಾರ್ಯಕ್ರಮ

ಉಡುಪಿ : ಜಮೀಯತೆ ಅಹ್ಲೆ ಹದೀಸ್ ಉಡುಪಿ ಜಿಲ್ಲೆ ಅಧೀನ ದಲ್ಲಿರುವ ಅಲ್ ಹಿಕ್ಮಾ ಗೈಡೆಸ್ಸ್ ಸೆಂಟರ್ ಉಡುಪಿ ಸಹಯೋಗದಿಂದ ಹೂಡೆಯ ಮದ್ರಸ ಉಬೈ ಬಿನ್ ಕಾಬ್ ವಾರ್ಷಿಕ ಕಾರ್ಯಕ್ರಮವು ಹೂಡೆಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಇತ್ತೀಚೆಗೆ ಜರಗಿತು.
ಇಸ್ಲಾಮಿನ ಹಿರಿಯ ವಿದ್ವಾಂಸ ಶೇಕ್ ಝಫರುಲ್ ಹಸನ್ ಮದನಿ ಶಾರ್ಜಾ ‘ಔಲಾದ್ ಕಿ ಬಗಾವತ್: ಅಸ್ಬಾಬ್ ಔರ್ ಇಲಾಜ್’ ವಿಷಯದ ಕುರಿತು ಪ್ರವಚನ ಮಾಡಿದರು.
ಕುರಾನ್ ಸಂಪೂರ್ಣ ಹಿಫ್ಝ್ ಮಾಡಿದ 4 ವಿದ್ಯಾರ್ಥಿಗಳನ್ನು ಮತ್ತು ಇತರ ಕುರಾನ್ ಸಂಬಂಧಪಟ್ಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕುರಾನ್ ಹಿಫ್ಝ್ ಸಂಪೂರ್ಣಗೊಳಿಸಿ 15 ದೌರ್ ಮುಗಿಸಿದ ಹಾಫೀಝ್ ಮುಹಮ್ಮದ್ ಅಫೀಫ್ ಅವರನ್ನು ಹಿಫ್ಝ್ ಸನದ್ ನೀಡಲಾಯಿತು. ಮದ್ರಸಾಕ್ಕೆ ಸೇವೆಸಲ್ಲಿಸಿದ ಹಿರಿಯರಾದ ಶೇಕ್ ಹುಸೈನ್ ಉಸ್ಮಾನ್, ಶೇಕ್ ಹಾಫಿಝ್ ಮುಹಮ್ಮದ್ ಫರಾಝ್ ನದ್ವಿ, ಶೇಕ್ ಮುತೀವುರ್ ರೆಹಮಾನ್ ಉಮ್ರಿ ನಝೀರಿ, ಮುಅಲ್ಲಿಮಾ ಫಾಯಿಝಾ ಹುಸೈನ್, ಮುಅಲ್ಲಿಮಾ ರೇಷ್ಮಾ ಹೂಡೆ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಸಲೀಮ್ ಖಾಝಿ ಶಿರೂರು, ಅಬ್ದುಲ್ ಅಝೀಮ್ ಅಸದಿ ಮಂಗಳೂರು ಉಪಸ್ಥಿತರಿದ್ದರು. ಹಾಫೀಝ್ ಮುಹಮ್ಮದ್ ಅಫೀಫ್ ಕುರಾನ್ ಪಠಿಸಿದರು. ಫೈಸಲ್ ಸುಲೈಮಾನ್ ಹೂಡೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.