ಮತದಾನ ಜಾಗೃತಿಯ ಕಾರ್ಟೂನ್ ಪ್ರದರ್ಶನ

ಮಂಗಳೂರು: ಮತದಾನ ನಮ್ಮೆಲ್ಲರ ಹಕ್ಕು. ವಿಧಾನಸಭೆಗೆ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದರಿಂದ ಉತ್ತಮ ಸರಕಾರ ರಚನೆಗೆ ಸಹಕಾರವಾಗುತ್ತದೆ. ಐದು ವರ್ಷಕೊಮ್ಮೆ ಚುನಾವಣೆ ನಡೆಯುವಾಗ ಅದನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕೆಂದು ಮತದಾನ ನೋಂದಾವಣಾಧಿಕಾರಿ ರಾಯಪ್ಪಹೇಳಿದರು.
ದ.ಕ. ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ನಗರದ ಬಲ್ಮಠದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮತದಾರರ ಜಾಗೃತಿ ಕಾರ್ಯಕ್ರಮ, ಮತದಾನ ಜಾಗೃತಿಯ ಕಾರ್ಟೂನ್ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ನಿಸರ್ಗ ಫೌಂಡೇಶನ್ನ ಮಂಜುನಾಥ್, ವ್ಯಂಗ್ಯ ಚಿತ್ರಕಾರ ಜಾನ್ಚಂದ್ರ, ಮಂಜುನಾಥ ಭಟ್, ಕಾಲೇಜಿನ ಪ್ರಾಂಶುಪಾಲ ಡಾ. ಜಗದೀಶ ಬಾಳ, ಸ್ವೀಪ್ ಸಮಿತಿಯ ಸದಸ್ಯ ಡೊಂಬಯ್ಯ ಇಡ್ಕಿದು ಮತ್ತಿತರರು ಉಪಸ್ಥಿತರಿದ್ದರು.
Next Story